ಆಲ್‍ರೌಂಡರ್ ಸದಾಶಿವ್ ನಿಧನ

16/09/2020

ನವದೆಹಲಿ ಸೆ.16 : ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಸದಾಶಿವ್ ಪಾಟೀಲ್(86) ಅವರು ಕೊಲ್ಹಾಪುರದ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.
ವೇಗದ ಬೌಲಿಂಗ್ ಆಲ್‍ರೌಂಡರ್ ಸದಾಶಿವ್ ಅವರು 1955ರ ಡಿಸೆಂಬರ್‍ನಲ್ಲಿ ಬಾಂಬೆಯಲ್ಲಿ(ಈಗಿನ ಮುಂಬೈ) ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಏಕೈಕ ಟೆಸ್ಟ್ ಆಡಿದರು. ಇದರಲ್ಲಿ ಅವರು ಒಟ್ಟು 51 ರನ್‍ಗಳಿಗೆ ಎರಡು ವಿಕೆಟ್ ಪಡೆದರು ಮತ್ತು 14 ರನ್ ಬಾರಿಸಿದರು. ಇದರ ನಂತರ ಅವರು ಮತ್ತೆ ಭಾರತ ಪರ ಆಡಲಿಲ್ಲ.
ರಣಜಿಯಲ್ಲಿ ಮಹಾರಾಷ್ಟ್ರ ಪರ ಆಡಿರುವ ಸದಾಶಿವ್ 83 ವಿಕೆಟ್ ಪಡೆದಿದ್ದಾರೆ. 1952-1964ರವರೆಗೆ 36 ಪ್ರಥಮ ದರ್ಜೆ ಪಂದ್ಯಗಳಲ್ಲಿ 866 ರನ್ ಸಿಡಿಸಿದ್ದಾರೆ. ಪ್ರಥಮ ದರ್ಜೆಯಲ್ಲಿ ಇನ್ನಿಂಗ್ಸ್‍ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ 38 ರನ್‍ಗಳಿಗೆ ಐದು ವಿಕೆಟ್ ಪಡೆದಿದ್ದಾರೆ.