ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ಸೆ.16 : ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆಯ ನಾಲ್ಕು ವರ್ಷದ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ 2020-21 ನೇ ಸಾಲಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ, ಐಟಿಐ, ಜೆಒಸಿ ಹಾಗೂ ತತ್ಸಮಾನ ಪರೀಕ್ಷೆಗಳಲ್ಲಿ ಪಾಸಾದ ಆಸಕ್ತರು ಅರ್ಜಿ ಸಲ್ಲಿಸಬಹುದು. ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಸ್ತರಣಾ ಕೇಂದ್ರವಾದ ಬಾದಾಮಿ ಬನಶಂಕರಿಯಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಮತ್ತು ಶಿಲ್ಪಕಲೆಯ ನಾಲ್ಕು ವರ್ಷದ ಪದವಿ ತರಗತಿಗಳು ಇನ್ನಿತರ ಸಾಮಾನ್ಯ ಪದವಿಗಳಾದ ಬಿ.ಎ., ಬಿ.ಕಾಂ, ಬಿ.ಎಸ್.ಸಿ, ಬಿ.ಎಸ್.ಡಬ್ಲ್ಯೂ ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕಿಂಗ್, ಕೆಎಎಸ್, ಐಎಎಸ್, ರೈಲ್ವೆ ಇಲಾಖೆ, ಎಫ್‍ಡಿಎ ಮುಂತಾದವುಗಳನ್ನು ಬರೆಯಲು ಅವಕಾಶವಿದೆ. ಅಲ್ಲದೆ ಉನ್ನತ ವ್ಯಾಸಂಗ ಮಾಡಬಯಸುವವರಿಗೆ ಎಂವಿಎ, ಎಂಎಫ್‍ಎ, ಎಂಫಿಲ್, ಪಿಎಚ್‍ಡಿ ಮತ್ತು ಬೇರೆ ಕ್ಷೇತ್ರಗಳಾದ ಪತ್ರಿಕೋದ್ಯಮ, ಬಿಪಿಎಡ್ ಕಲಿಯಲು ಅವಕಾಶಗಳಿವೆ.
ದೃಶ್ಯಕಲೆಯ ಈ ಪದವಿಗಳನ್ನು ಸ್ವ ಉದ್ಯೋಗ ಪ್ರಧಾನವಾಗಿ ರೂಪಿಸಲಾಗಿದೆ. ಸಾಂಪ್ರದಾಯಿಕ ಶಿಲ್ಪಕಲೆಯ ಪದವೀಧರರು ಸ್ವಂತ ಸ್ಟುಡಿಯೋ ಆರಂಭಿಸಿ ಮೂರ್ನಾಲ್ಕು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಚಿತ್ರಕಲಾ ಪದವೀಧರರು ಚಲನಚಿತ್ರ, ಧಾರಾವಾಹಿ, ದೂರದರ್ಶನ(ಟಿ.ವಿ)ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಎನಿಮೇಶನ್, ಪೋಸ್ಟರ್ ಡಿಸೈನ್, ಸ್ಕೆಚಿಂಗ್‍ನಲ್ಲಿ ಪಳಗಿದವರು ಬೇರೆ ಬೇರೆ ವಾಣಿಜ್ಯ ಕಂಪನಿಗಳು, ಜಾಹಿರಾತು ಸಂಸ್ಥೆಗಳು, ಟೆಕ್ಸ್‍ಟೈಲ್ ಡಿಸೈನ್, ಪತ್ರಿಕೋದ್ಯಮ, ಫ್ಯಾಶನ್ ಡಿಸೈನ್ ಮುಂತಾದ ಅನೇಕ ಕಡೆಗಳಲ್ಲಿ ಕೆಲಸ ಮಾಡಬಹುದು.
ಬಾದಾಮಿ ಕೇಂದ್ರದಲ್ಲಿ ನಿರಂತರವಾಗಿ ಪ್ರಖ್ಯಾತ ಕಲಾವಿದರು ಮತ್ತು ಸೃಜನಶೀಲ ಯುವ ಕಲಾವಿದರಿಂದ ಕಲಾಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾ ಶಿಬಿರ, ಕಾರ್ಯಗಾರ, ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತವೆ. ಕೇಂದ್ರವು ನಾಡೋಜ ಡಾ.ಆರ್.ಎಂ.ಹಡಪದ ಅವರ ಹೆಸರಿನಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆಯ ಸುಸಜ್ಜಿತ ಆರ್ಟ್ ಗ್ಯಾಲರಿಯನ್ನು (ಕಲಾ ಸಂಗ್ರಹಾಲಯ) ಹೊಂದಿದೆ. ಇಲ್ಲಿ ನಮ್ಮ ಸಂಪ್ರದಾಯ ಶಿಲ್ಪ ಮತ್ತು ಚಿತ್ರಗಳನ್ನು ಸಂಗ್ರಹಿಸಿದ್ದು, ಪ್ರದರ್ಶನ ಹಾಗೂ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ 9449256814, 9448580056, 9886664967 ನ್ನು ಸಂಪರ್ಕಿಸಬಹುದು.
