ಜಾನಪದ ಕವನ ಸಂಕಲನ ನಾಟು ನುಡಿ ಕೃತಿ ಸೆ.20 ರಂದು ಲೋಕಾಪ೯ಣೆ

September 16, 2020

ಮಡಿಕೇರಿ.ಸೆ.16 – ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಕಟಿಸಿರುವ ಜಿಲ್ಲೆಯ ವಿವಿಧ ಕವಿಗಳ ಜಾನಪದ ಕವನ ಸಂಕಲನ ನಾಟು ನುಡಿ ಕೃತಿಯನ್ನುಸೆ. 20 ರಂದು ಲೋಕಾಪ೯ಣೆಗೊಳಿಸಲಾಗುತ್ತದೆ.

ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ಆಯೋಜಿತ ಸರಳ ಕಾಯ೯ಕ್ರಮದಲ್ಲಿ ಕೊಣನೂರಿನ ಬಿ.ಎಂ.ಶೆಟ್ಟಿ ಸಕಾ೯ರಿ ಪ್ರಥಮ ದಜೆ೯ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಕಾಶ್ ಕೖತಿ ಲೋಕಾಪ೯ಣೆಗೊಳಿಸಲಿದ್ದಾರೆ.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅಧ್ಯಕ್ಷತೆ ವಹಿಸುವ ಕಾಯ೯ಕ್ರಮದಲ್ಲಿ ಕೃತಿ ಪ್ರಕಟಣೆಯ ದಾನಿಗಳಾದ ಅಂಬೆಕಲ್ ಕುಶಾಲಪ್ಪ, ಸುಶೀಲಾ ಕುಶಾಲಪ್ಪ, ಜಾನಪದ ಪರಿಷತ್ ಪ್ರಧಾನ ಕಾಯ೯ದಶಿ೯ ಮುನೀರ್ ಅಹ್ಮದ್, ಖಚಾಂಚಿ ಎಸ್.ಎಸ್.ಸಂಪತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಕಟಣೆ ತಿಳಿಸಿದೆ.

error: Content is protected !!