1 ಕೋಟಿ ರೂ. ವೆಚ್ಚದಲ್ಲಿ ಕೋಪಟ್ಟಿ ಶ್ರೀಮಹಾವಿಷ್ಣು ದೇವಾಲಯ ನಿರ್ಮಾಣ
16/09/2020

ಮಡಿಕೇರಿ ಸೆ.16 : ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಭಾಗಮಂಡಲದ ಕೋಪಟ್ಟಿ ಶ್ರೀಮಹಾವಿಷ್ಣು ದೇವಾಲಯದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಸುಂದರ ಹಸಿರ ಪರಿಸರದ ನಡುವೆ ನೆಲೆ ನಿಂತಿರುವ ತನ್ನದೇ ಆದ ಶಕ್ತಿಯ ಮೂಲಕ ಭಕ್ತರ ಗಮನ ಸೆಳೆದಿರುವ ಇತಿಹಾಸ ಪ್ರಸಿದ್ಧ ಶ್ರೀಮಹಾವಿಷ್ಣುವಿನ ಹಳೆಯ ದೇವಾಲಯವನ್ನು ಕೆಡವಿ ನೂತನ ದೇಗುಲ ನಿರ್ಮಿಸಲಾಗುತ್ತಿದೆ. ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲ್ಲಿ ಸುಂದರವಾದ ದೇವಸ್ಥಾನ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ವರ್ಷ ಪುನರ್ ಪ್ರತಿಷ್ಠಾ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿದೆ.

