ಹೊದವಾಡ ಗ್ರಾಮದ ನಿವಾಸಿ ಕೋವಿಡ್ ಗೆ ಬಲಿ : ಕೊಡಗಿನಲ್ಲಿ ಸಾವಿನ ಸಂಖ್ಯೆ 29 ಕ್ಕೆ ಏರಿಕೆ

16/09/2020

ಮಡಿಕೇರಿ ಸೆ.16 : ಮಡಿಕೇರಿ ತಾಲ್ಲೂಕಿನ ಹೊದವಾಡ ಗ್ರಾಮದ 58 ವರ್ಷದ ಪುರುಷರೊಬ್ಬರು ಕೋವಿಡ್ ಸೋಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2097 ಆಗಿದ್ದು, ಸಾವಿಗೀಡಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಹೊದವಾಡ ಗ್ರಾಮದ ನಿವಾಸಿ, 58 ವರ್ಷದ ಪುರುಷರೊಬ್ಬರು ಸೆ.14 ತೀವ್ರ ವಾಂತಿ ಮತ್ತು ಸುಸ್ತು ಎಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದು, ಅವರಿಗೆ ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಲಾಗಿ, ಕೋವಿಡ್ ಸೋಂಕು ದೃಢಪಟ್ಟಿತ್ತು.
ಅವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐ.ಸಿ.ಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಂಗಳವಾರ ರಾತ್ರಿ 8.50 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ 22 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಪಿರಿಯಾಪಟ್ಟಣ ಹಾರನಹಳ್ಳಿಯ 31 ವರ್ಷದ ಪುರುಷ, ಮಡಿಕೇರಿ ಚೇರಂಬಾಣೆಯ ಅರುಣ ಪಿಯು ಕಾಲೇಜು ಸಮೀಪದ 30 ವರ್ಷದ ಪುರುಷ, ಮಡಿಕೇರಿ ತಾಳತ್ತಮನೆಯ ನೇತಾಜಿ ಯುವಕ ಸಂಘ ಸಮೀಪದ 43 ವರ್ಷದ ಪುರುಷ, ನಾಪೋಕ್ಲು ಬೇತು ಗ್ರಾಮದ ಎಕ್ಸೆಲ್ ಶಾಲೆ ಸಮೀಪದ 31 ವರ್ಷದ ಮಹಿಳೆ, ವೀರಾಜಪೇಟೆ ಮಲೆತಿರಿಕೆ ಬೆಟ್ಟದ ಡೆಂಟಲ್ ಕಾಲೇಜು ಸಮೀಪದ 31 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಹಾಸನದ 41 ವರ್ಷದ ಪುರುಷ, ಮಡಿಕೇರಿ ಕಗ್ಗೋಡ್ಲುವಿನ ಭಗವತಿ ದೇವಾಲಯ ಸಮೀಪದ 38 ವರ್ಷದ ಪುರುಷ, 15 ವರ್ಷದ ಬಾಲಕ ಮತ್ತು 34 ವರ್ಷದ ಮಹಿಳೆ, ವೀರಾಜಪೇಟೆ ಅಮ್ಮತ್ತಿಯ ಪಾಲಿಬೆಟ್ಟ ರಸ್ತೆಯ 68 ವರ್ಷದ ಪುರುಷ, ಕುಶಾಲನಗರ ಬೈಪಾಸ್ ರಸ್ತೆಯ 29 ಮತ್ತು 26 ವರ್ಷದ ಪುರುಷರು, ವೀರಾಜಪೇಟೆ ಬಾಣಂಗಾಲ ಹುಂಡಿ ಬಾಡಗದ 1 ವರ್ಷದ ಬಾಲಕ, 23 ಮತ್ತು 50 ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಮಡಿಕೇರಿ ಎಪಿಎಂಸಿ ಹಿಂಭಾಗದ 31 ವರ್ಷದ ಪುರುಷ, ವೀರಾಜಪೇಟೆ ವಿಜಯನಗರದ 49 ವರ್ಷದ ಪುರುಷ, ಅಮ್ಮತ್ತಿಯ 26 ಮತ್ತು 22 ವರ್ಷದ ಪುರುಷರು, ಸೋಮವಾರಪೇಟೆ ರೆಸಾರ್ಟ್‍ನ 22 ವರ್ಷದ ಪುರುಷ, ಸೋಮವಾರಪೇಟೆ ಎಂ.ಡಿ ಬ್ಲಾಕ್‍ನ 27 ವರ್ಷದ ಮಹಿಳೆ, ಹಾಸನ ಅರಕಲಗೂಡುವಿನ ಮಸೀದಿ ಬಳಿಯ 70 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2097ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1686 ಮಂದಿ ಗುಣಮುಖರಾಗಿದ್ದಾರೆ. 383 ಸಕ್ರಿಯ ಪ್ರಕರಣಗಳಿದ್ದು, 29 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 343 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.