ಹಿಂದೂ ಜಾಗರಣಾ ವೇದಿಕೆಯಿಂದ ಆಹಾರ ಸಾಮಾಗ್ರಿ ವಿತರಣೆ

16/09/2020

ಮಡಿಕೇರಿ ಸೆ.16 : ಕಳೆದ ತಿಂಗಳು ಸುರಿದ ಮಹಾಮಳೆಯಿಂದ ಸಂಭವಿಸಿದ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕಡಗದಾಳು ಗ್ರಾಮದ 36 ಕುಟುಂಬಗಳಿಗೆ ಹಿಂದೂ ಜಾಗರಣ ವೇದಿಕೆಯ ಕೊಡಗು ಘಟಕ ಹಾಗೂ ತಮಿಳುನಾಡಿನ ಸಿಕ್ಸ್ತ್ ಸೆನ್ಸ್ ಫೌಂಡೇಷನ್ ಸಹಯೋಗದಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ನೀಡಲಾಯಿತು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಬಿ.ಮಹೇಶ್, ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಕಡಗದಾಳು, ಮಾತೃ ಸುರಕ್ಷಾ ಮಡಿಕೇರಿ ತಾಲೂಕು ಸಂಯೋಜಕ ವಿವೇಕ್ ,ಕಡಗದಾಳು ಮಂಡಲ ಅಧ್ಯಕ್ಷ ಜನಾರ್ಧನ್ ನೀರುಕೊಲ್ಲಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್, ಬೊಟ್ಲಪ್ಪ ಘಟಕದ ಅಧ್ಯಕ್ಷ ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿ ಹರೀಶ್ ಕಡಗದಾಳು ಹಾಗೂ ಸ್ಥಳೀಯ ನಿವಾಸಿಗಳು ಈ ಸಂದರ್ಭ ಹಾಜರಿದ್ದರು.