ಕೊಡಗಿನಲ್ಲಿ ಸೋಂಕಿತ ಸಂಖ್ಯೆ 2097ಕ್ಕೆ ಏರಿಕೆ : 1686 ಮಂದಿ ಗುಣಮುಖ

16/09/2020

ಮಡಿಕೇರಿ ಸೆ.16 : ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ 22 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿಯ 31 ವರ್ಷದ ಪುರುಷ. ಮಡಿಕೇರಿ ಚೇರಂಬಾಣೆಯ ಅರುಣ ಪಿಯು ಕಾಲೇಜು ಸಮೀಪದ 30 ವರ್ಷದ ಪುರುಷ. ಮಡಿಕೇರಿ ತಾಳತ್ತಮನೆಯ ನೇತಾಜಿ ಯುವಕ ಸಂಘ ಸಮೀಪದ 43 ವರ್ಷದ ಪುರುಷ. ನಾಪೆÇೀಕ್ಲು ಬೇತು ಗ್ರಾಮದ ಎಕ್ಸೆಲ್ ಶಾಲೆ ಸಮೀಪದ 31 ವರ್ಷದ ಮಹಿಳೆ. ವಿರಾಜಪೇಟೆ ಮಲ್ಲೇತಿರಿಕ ಬೆಟ್ಟದ ಡೆಂಟಲ್ ಕಾಲೇಜು ಸಮೀಪದ 31 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಹಾಸನದ 41 ವರ್ಷದ ಪುರುಷ. ಮಡಿಕೇರಿ ಕಗ್ಗೋಡ್ಲುವಿನ ಭಗವತಿ ದೇವಾಲಯ ಸಮೀಪದ 38 ವರ್ಷದ ಪುರುಷ, 15 ವರ್ಷದ ಬಾಲಕ ಮತ್ತು 34 ವರ್ಷದ ಮಹಿಳೆ. ವಿರಾಜಪೇಟೆ ಅಮ್ಮತ್ತಿಯ ಪಾಲಿಬೆಟ್ಟ ರಸ್ತೆಯ 68 ವರ್ಷದ ಪುರುಷ. ಕುಶಾಲನಗರ ಬೈಪಾಸ್ ರಸ್ತೆಯ 29 ಮತ್ತು 26 ವರ್ಷದ ಪುರುಷರು. ವಿರಾಜಪೇಟೆ ಭಾನಂಗಳ ಹುಂಡಿ ಬಾಡಗದ 1 ವರ್ಷದ ಬಾಲಕ, 23 ಮತ್ತು 50 ವರ್ಷದ ಮಹಿಳೆಯರು. ಮಡಿಕೇರಿ ಎಪಿಎಂಸಿ ಹಿಂಭಾಗದ 31 ವರ್ಷದ ಪುರುಷ. ವಿರಾಜಪೇಟೆ ವಿಜಯನಗರದ 49 ವರ್ಷದ ಪುರುಷ. ವಿರಾಜಪೇಟೆ ಅಮ್ಮತ್ತಿಯ 26 ಮತ್ತು 22 ವರ್ಷದ ಪುರುಷರು. ಸೋಮವಾರಪೇಟೆ ರೆಸಾರ್ಟ್ ನ 22 ವರ್ಷದ ಪುರುಷ. ಸೋಮವಾರಪೇಟೆ ಎಂ.ಡಿ ಬ್ಲಾಕಿನ 27 ವರ್ಷದ ಮಹಿಳೆ. ಹಾಸನ ಅರಕಲಗೂಡುವಿನ ಮಸೀದಿ ಬಳಿಯ 70 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2097 ಆಗಿದ್ದು, 1686 ಮಂದಿ ಗುಣಮುಖರಾಗಿದ್ದಾರೆ. 383 ಸಕ್ರಿಯ ಪ್ರಕರಣಗಳಿದ್ದು, 28 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 343 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.