ವೀರಶೈವ ಲಿಂಗಾಯಿತರ ಕ್ಷಮೆ ಕೋರಿದ ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ

16/09/2020

ಮಡಿಕೇರಿ ಸೆ.16 : ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರ ಗಮನ ಸೆಳೆಯಲು ಬರೆದಿರುವ ಬಹಿರಂಗ ಪತ್ರದಲ್ಲಿ ತಪ್ಪಾದ ಪದಬಳಕೆಯಿಂದ ವೀರಶೈವ ಲಿಂಗಾಯಿತ ಬಂಧುಗಳ ಭಾವನೆಗೆ ಧಕ್ಕೆಯಾಗಿದ್ದು, ಇದಕ್ಕೆ ವಿಷಾದ ವ್ಯಕ್ತಪಡಿಸುವುದರೊಂದಿಗೆ ಬಹಿರಂಗವಾಗಿ ಎಲ್ಲರ ಕ್ಷಮೆಯಾಚಿಸುವುದಾಗಿ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಜನರ ಹಿತದೃಷ್ಟಿಯಿಂದ ಸಂಸದರ ಎದುರು ಸಮಸ್ಯೆಗಳನ್ನು ಬಿಚ್ಚಿಡುವ ಭರದಲ್ಲಿ ಬಳಸಲಾದ ವಾಕ್ಯಗಳಲ್ಲಿ ಸೇರಿಹೋದ ಒಂದು ವಾಕ್ಯದಿಂದ ವೀರಶೈವ ಲಿಂಗಾಯಿತ ಬಂಧುಗಳ ಭಾವನೆಗಳಿಗೆ ಧಕ್ಕೆಯಾಗಿರುವುದು ನನ್ನ ಅರಿವಿಗೆ ಬಂದಿದೆ. ನನ್ನಿಂದಾದ ಲೋಪದಿಂದ ನೊಂದಿರುವ ಸಮಾಜದ ಎಲ್ಲಾ ಬಂಧುಗಳಲ್ಲಿ ಕ್ಷಮೆಯಾಚಿಸುತ್ತಿದ್ದು, ಇನ್ನು ಮುಂದೆ ಈ ರೀತಿಯ ಪ್ರಮಾದಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.