ಕಾಡಾನೆ ದಾಳಿ : ಬಿಜೆಪಿ ಕೃಷಿ ಮೋರ್ಚದಿಂದ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ

17/09/2020

ಮಡಿಕೇರಿ ಸೆ. 17 : ನಿಟ್ಟೂರು-ಕಾರ್ಮಾಡು ಗ್ರಾಮದಲ್ಲಿ ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶವಾಗಿರುವುದನ್ನು ಖಂಡಿಸಿ ವಿರಾಜಪೇಟೆ ತಾಲ್ಲೂಕು ಬಿಜೆಪಿ ಕೃಷಿ ಮೋರ್ಚದ ವತಿಯಿಂದ ಅರಣ್ಯ ಇಲಾಖೆ ವಿರುದ್ಧ ಗದ್ದೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪೊನ್ನಿಮಾಡ ಕುಶಾಲಪ್ಪ ಅವರಿಗೆ ಸೇರಿದ ಗದ್ದೆಯನ್ನು ಪರಿಶೀಲಿಸಿದ ಪ್ರತಿಭಟನಕಾರರು ಸ್ಥಳದಲ್ಲಿ ಪ್ರತಿಭಟಿಸಿದರು.
ಸ್ಥಳಕ್ಕೆ ಆಗಮಿಸಿದ ಕಲ್ಲಳ್ಳ ವಲಯ ಅರಣ್ಯ ಅಧಿಕಾರಿ ಗಿರೀಶ್ ಚೌಗುಲೆ ಅವರನ್ನು ತರಾಟೆಗೆ ತೆಗೆದುಕೊಂಡರು. ನಿರಂತರವಾಗಿ ಆನೆ ಬರುತ್ತಿದ್ದರೂ, ನಿಯಂತ್ರಣಕ್ಕೆ ಯೋಜನೆ ರೂಪಿಸಿಲ್ಲ. ಸಿಬ್ಬಂದಿ ನೇಮಿಸಿ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈಲ್ವೆ ಬ್ಯಾರಿಕೆಟ್ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ, ಅಲ್ಲಿಯವರೆಗೂ ರಾತ್ರಿ ಪಾಳಯದಲ್ಲಿ ಸಿಬ್ಬಂದಿ ನಿಯೋಜಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕೃಷಿ ಮೋರ್ಚ ಸದಸ್ಯ ಕಟ್ಟೇರ ಕವನ್, ಕಾರ್ಮಾಡು ಬಿಜೆಪಿ ಪ್ರಮುಖ್ ಮುಕ್ಕಟೇರ ಸೋಮಯ್ಯ, ರೈತ ಸಂಘದ ಮೇಚಂಡ ಕಿಶಮಾಚಯ್ಯ, ದಿನು ಬೆಳ್ಳಿಯಪ್ಪ, ಬಿಜೆಪಿ ಪ್ರಮುಖರಾದ ಜಿ. ಬಿ. ಸುದೀಪ್, ವಿಬಿನ್ ಗಾಂಧಿ, ಪಿ. ಕೆ ಕುಶಾಲಪ್ಪ, ಪಿ. ಕೆ. ಶಶಿ, ಕೆ ಜಿ. ಶಿವಪ್ಪ, ಕೆ. ಯಂ. ಕುಟ್ಟಪ್ಪ, ಯಂ. ಪಿ ರಮೇಶ್ ಅಯ್ಯಪ್ಪ, ಯಂ. ಡಿ. ತಮ್ಮಯ್ಯ, ವಿಕಾಸ್ ಉತ್ತಪ್ಪ, ಎ. ಎನ್ ವಿನು ದೇವಯ್ಯ, ಕೆ.ಎಂ.ಮಂಜುನಾಥ, ಎಂ. ಡಿ. ನಿಖಿಲ್, ಪಿ. ಎಂ. ನಂಜಪ್ಪ, ಪಿ.ಕೆ. ರಮೇಶ್, ಕೆ.ಪಿ. ಮಂದಣ್ಣ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.