ಮಹಿಳೆಯರಿಗೆ ಅಸಭ್ಯ ಸಂದೇಶ ಕಳುಹಿಸುತ್ತಿದ್ದವನಿಗೆ ಧರ್ಮದೇಟು : ಪ್ರಕರಣ ದಾಖಲು

September 17, 2020

ಮಡಿಕೇರಿ ಸೆ.16 : ಮಹಿಳೆಯರಿಗೆ ಅಸಭ್ಯ ರೀತಿಯಲ್ಲಿ ಸಂದೇಶ ರವಾನಿಸುತ್ತಿದ್ದ ಆರೋಪದಡಿ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬನನ್ನು ಮಡಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೊಬೈಲ್ ಅಂಗಡಿಗೆ ಬಂದು ರಿಚಾರ್ಜ್ ಮಾಡಿಸಿಕೊಂಡು ತೆರಳಿದ ಕೆಲವು ಮಹಿಳೆಯರ ಸಂಖ್ಯೆಗಳಿಗೆ ಈತ ಸಂದೇಶ ರವಾನಿಸುತ್ತಿದ್ದ ಎಂದು ಹೇಳಲಾಗಿದೆ. ಮಹಿಳೆಯೊಬ್ಬರು ಸಂದೇಶ ರವಾನಿಸುತ್ತಿದ್ದವನನ್ನು ಪತ್ತೆ ಹಚ್ಚುವುದಕ್ಕಾಗಿ ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರೊಂದಿಗೆ ಜಿಲ್ಲಾ ಆಸ್ಪತ್ರೆ ಬಳಿ ಬಂದಾಗ ಆತ ಸಿಕ್ಕಿ ಬಿದ್ದಿದ್ದಾನೆ.
ತಕ್ಷಣ ಆತನನ್ನು ಹಿಡಿದ ವೇದಿಕೆಯ ಕಾರ್ಯಕರ್ತರು ಹಾಗೂ ಮಹಿಳೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು.

error: Content is protected !!