ನಾರಾಯಣ ಆಚಾರ್ ಗೆ ಶ್ರದ್ಧಾಂಜಲಿ

17/09/2020

ಮಡಿಕೇರಿ ಸೆ.17 : ಪ್ರಾಕೃತಿಕ ವಿಕೋಪದಲ್ಲಿ ಮೃತರಾದ ಶ್ರೀತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್.ನಾರಾಯಣಾಚಾರ್, ಅವರ ಪತ್ನಿ ಟಿ.ಎಸ್.ಶಾಂತಾ, ಸಹೋದರ ಟಿ.ಎಸ್.ಆನಂದತೀರ್ಥ ಹಾಗೂ ಸಹಾಯಕ ಅರ್ಚಕರಾಗಿದ್ದ ಶ್ರೀನಿವಾಸ ಪಡಿಲ್ಲಾಯ ಮತ್ತು ರವಿಕಿರಣ್ ಅವರುಗಳಿಗೆ ಇಂದು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರೀಭಗಂಡೇಶ್ವರ, ಶ್ರೀ ತಲಕಾವೇರಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಕೋಡಿ ಮೋಟಯ್ಯ, ಕೆದಂಬಾಡಿ ಟಿ.ರಮೇಶ್, ಉದಿಯಂಡ.ಪಿ.ಸುಭಾಸ್, ನಿಡ್ಯಮಲೆ ಸುರೇಶ್ ಮೀನಾಕ್ಷಿ, ಕೆ.ಎಸ್.ಅಣ್ಣಯ್ಯ, ಅರ್ಚಕರಾದ ಎಸ್,ರವಿಕುಮಾರ್ ಮತ್ತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಎಂ.ಕೃಷ್ಣಪ್ಪ ಅವರು ಉಪಸ್ಥಿತರಿದ್ದರು.