ಸಂಸದರ ವೇತನದಲ್ಲಿ ಶೇ.30ರಷ್ಟು ಕಡಿತ

September 17, 2020

ನವದೆಹಲಿ ಸೆ.16 : ಕೋವಿಡ್ ಹಾವಳಿಯಿಂದ ಉಂಟಾಗಿರುವ ಹಣಕಾಸು ಬಿಕ್ಕಟ್ಟು ನಿಭಾಯಿಸಲು ಸಂಸದರ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ತಿದ್ದುಪಡಿ ವಿಧೇಯಕ್ಕೆ ಮಂಗಳವಾರ ಲೋಕಸಭೆ ಅನುಮೋದನೆ ನೀಡಿದೆ.
ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ತಿದ್ದುಪಡಿ ವಿಧೇಯವನ್ನು ಸೋಮವಾರ ಕೆಳಮನೆಯಲ್ಲಿ ಮಂಡಿಸಲಾಗಿತ್ತು. ವೇತನ ಕಡಿತಕ್ಕೆ ಸಂಬಂಧಿಸಿದಂತೆ ಈ ಮೊದಲು ಜಾರಿಗೊಳಿಸಲಾಗಿದ್ದ ಸುಗ್ರೀವಾಜ್ಞೆಗೆ ಇದು ಪರ್ಯಾಯವಾಗಲಿದೆ.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನೂ 2020-21, 2021-22ನೇ ಸಾಲಿಗೆ ಸ್ಥಗಿತಗೊಳಿಸಲಾಗುವುದು. ಇದು ಎರಡು ವರ್ಷಕ್ಕೆ ಸೀಮಿತವಾಗಿರುವ ತಾತ್ಕಾಲಿಕ ವ್ಯವಸ್ಥೆ ಎಂದು ಅವರು ಸ್ಪಷ್ಟಪಡಿಸಿದರು. ವೇತನ ಕಡಿತ ಸಂಬಂಧ ಕೇಂದ್ರ ಸರಕಾರವು ಏ.6ರಂದೇ ಸುಗ್ರೀವಾಜ್ಞೆ ಹೊರಡಿಸಿದೆ.

error: Content is protected !!