ಕೋವಿಡ್ ಸೋಂಕಿಗೆ ಯಡವನಾಡು ಗ್ರಾಮದ ಮಹಿಳೆ ಬಲಿ : ಕೊಡಗಿನಲ್ಲಿ ಸಾವಿನ ಸಂಖ್ಯೆ 30ಕ್ಕೆ ಏರಿಕೆ

September 17, 2020

ಮಡಿಕೇರಿ ಸೆ. 17 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಂದು ಸಾವು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 30 ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿಜಾಯ್ ತಿಳಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ಯಡವನಾಡು ಗ್ರಾಮದ ನಿವಾಸಿ, ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ 96 ವರ್ಷದ ಮಹಿಳೆಯೊಬ್ಬರು ದಿನಾಂಕ:14-09-2020 ರಂದು ಕಫ ಸಂಬಂಧಿತ ಸಮಸ್ಯೆಯ ಕಾರಣ ಚಿಕಿತ್ಸೆಗಾಗಿ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ದಾಖಲಾಗಿದ್ದರು. ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿ, ಕೋವಿಡ್ ಸೋಂಕು ದೃಢಪಟ್ಟಿದ್ದು, ದಿನಾಂಕ:16-09-2020 ರಂದು ಮೃತ ಪಟ್ಟಿರುತ್ತಾರೆ.

error: Content is protected !!