ಹುಲಿ ದಾಳಿಗೆ ಹಸು ಬಲಿ : ದೇವಪುರ ಸಮೀಪದ ಭದ್ರಗೊಳ ಗ್ರಾಮದಲ್ಲಿ ಘಟನೆ

September 17, 2020

ಮಡಿಕೇರಿ ಸೆ. 17 : ದೇವಪುರ ಸಮೀಪದ ಹೆಬ್ಬಾಲೆ- ಭದ್ರಗೊಳ ಗ್ರಾಮದಲ್ಲಿ ಸಣ್ಣುವಂಡ ಮುತ್ತಪ್ಪ ಎಂಬುವರಿಗೆ ಸೇರಿದ್ದ ಹಸುವೊಂದನ್ನು ಹುಲಿ ದಾಳಿ ನಡೆಸಿ ಹತ್ಯೆ ಮಾಡಿದೆ.
ಕೊಟ್ಟಿಗೆಯಲ್ಲಿದ್ದ ಹಸುವನ್ನು ಹೊರಗೆ ಎಳೆದೊಯ್ದ ಹುಲಿ ಹಸುವಿನ ಹಿಂಭಾಗವನ್ನು ಸಂಪೂರ್ಣವಾಗಿ ತಿಂದು ಹಾಕಿದೆ.
ಮನೆ ಸಮೀಪದ ಕೊಟ್ಟಿಗೆಯವರೆಗೆ ಹುಲಿ ಸಂಚಾರ ಕಂಡುಬಂದಿರುವುದರಿಂದ ಗ್ರಾಮದ ಜನತೆಯಲ್ಲೂ ಭಯ, ಆತಂಕ ಆವರಿಸಿದೆ.
ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

error: Content is protected !!