ಮುಸ್ಲಿಂ ಬ್ರದರ್ ರಿಲೀಫ್ ಸಂಘಟನೆಯಿಂದ ಮೃತ ರಾಜು ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ

September 17, 2020

ಮಡಿಕೇರಿ ಸೆ. 17 : ಚೇರಂಬಾಣೆಯ ಮುಸ್ಲಿಂ ಬ್ರದರ್ ರಿಲೀಫ್ ಸಂಘಟನೆ ವತಿಯಿಂದ ನವಗ್ರಾಮದ ದಿ. ರಾಜು ಅವರ ಮನೆಗೆ ಒಂದು ತಿಂಗಳ ದಿನಸಿ ಕಿಟ್ ವಿತರಿಸಲಾಯಿತು.
ಅಲ್ಲದೇ ಗ್ರಾಮದ ಝಬೈರ್ ಎಂಬ ವಿಶೇಷ ಚೇತನ ಯುವಕನಿಗೆ ಚಿಕಿತ್ಸಾ ವೆಚ್ಚವನ್ನು ಸಂಘಟನೆಯಿಂದ ನೀಡಲಾಯಿತು.
ಮುಸ್ಲಿಂ ಬ್ರದರ್ ರಿಲೀಫ್ ಸಂಘಟನೆಯು ಅನೇಕ ಯುವ ಸಮೂಹವನ್ನು ಒಳಗೊಂಡಿದ್ದು, ಅನೇಕ ಸಾಮಾಜಿಕ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ ಎಂದು ಸಂಘಟನೆಯ ಪ್ರಮುಖರು ಮಾಹಿತಿ ನೀಡಿದರು.

error: Content is protected !!