ಚಿಕನ್ ಗೀ ರೋಸ್ಟ್ ಮಾಡುವ ವಿಧಾನ

17/09/2020

ಬೇಕಾಗುವ ಸಾಮಗ್ರಿಗಳು: ಬೋನ್ ಲೆಸ್ ಚಿಕನ್ ಅರ್ಧ ಕೆಜಿ, ಒಣ ಕೆಂಪು ಮೆಣಸು 15-20 (ಖಾರ ಬೇಕಿದ್ದರೆ ಇನ್ನೊಂದು ನಾಲ್ಕು ಮೆಣಸು ಹಾಕಬಹುದು), ಕರಿಮೆಣಸಿನ ಪುಡಿ ಅರ್ಧಚಮಚ, ಅರಶಿಣ ಪುಡಿ ಅರ್ಧ ಚಮಚ,ಬೆಳ್ಳುಳ್ಳಿ 2 ಎಸಳು ಮತ್ತು ಸ್ವಲ್ಪ ಕರಿಬೇವಿನ ಎಲೆ, ಚಿಕ್ಕ ಶುಂಠಿ ತುಂಡು, ರುಚಿಗೆ ತಕ್ಕ ಉಪ್ಪು, ಮೊಸರು ಅರ್ಧ ಕಪ್,ಒಂದು ನಿಂಬೆ ಗಾತ್ರದ ಹುಣಸೆ ಹಣ್ಣು, ಶುದ್ಧವಾದ ತುಪ್ಪ 200ಮಿಲೀ

ತಯಾರಿಸುವ ವಿಧಾನ: ಹುಣಸೆ ಹಣ್ಣಿನ ರಸ ಮಾಡಿ ಅದರಲ್ಲಿ ಒಣ ಕೆಂಪು ಮೆಣಸನ್ನು ಒಂದು ರಾತ್ರಿ ನೆನೆಹಾಕಬೇಕು. ನಂತರ ಹುಣಸೆ ಹಣ್ಣಿನ ಹಾಕಿದ ಒಣ ಕೆಂಪು ಮೆಣಸು, ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ಕರಿಮೆಣಸು ಹಾಕಿ ಚೆನ್ನಾಗಿ ಪೇಸ್ಟ್ ಮಾಡಬೇಕು. ನಂತರ 200 ಮಿಲೀ ತುಪ್ಪ ಹಾಕಿ ತುಪ್ಪ ಬಿಸಿಯಾದಾಗ ಸ್ವಲ್ಪ ಕರಿಬೇವಿನ ಎಲೆ ಮತ್ತು ಈ ಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಬೇಕು.

ತುಪ್ಪ ಮಿಶ್ರಣದ ಮೇಲ್ಭಾಗದಲ್ಲಿ ತೇಲುವಂತೆ ಇರಬೇಕು. ನಂತರ ಅದಕ್ಕೆ ಚಿಕನ್ ಮತ್ತು ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ಮೊಸರು ಹಾಕಿ ಬೇಯಿಸಬೇಕು. ಆಗಾಗ ಸೌಟ್ ನಿಂದ ಚಿಕನ್ ಅನ್ನು ತಿರುಗಿಸುತ್ತಾ ಇರಬೇಕು, ಮಿಶ್ರಣ ತುಂಬಾ ಗಟ್ಟಿಯಾಗಿದ್ದರೆ ಇನ್ನೂ ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಮಿಶ್ರಮಾಡಿ ಚಿಕನ್ ಬೇಯಿಸಬೇಕು. ಚಿಕನ್ ಬೆಂದ ತಕ್ಷಣ ಉರಿಯಿಂದ ತೆಗೆಯಬೇಕು. ಈ ಚಿಕನ್ ಗೀ ರೋಸ್ಟ್ ಡ್ರೈ ಇರಬೇಕು.