ಚಾರಣಿಗರ ನೆಚ್ಚಿನ ಪ್ರವಾಸಿ ತಾಣ ಸಾವನದುರ್ಗ

17/09/2020

ಬೆಂಗಳೂರಿನಿಂದ ಅರವತ್ತು ಕಿ.ಮೀ ಪಶ್ಚಿಮಕ್ಕಿರುವ ಸಾವನದುರ್ಗ ಬೆಟ್ಟ ಏಷ್ಯಾದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ ಎಂದೇ ಹೆಸರುವಾಸಿ, ಇಲ್ಲಿರುವ ಅವಳಿ ಬೆಟ್ಟಗಳನ್ನು ಬಿಳಿಗುಡ್ಡ ಮತ್ತು ಕರಿಗುಡ್ಡ ಎಂದು ಕರೆಯಲಾಗುತ್ತದೆ. ಹಿಂದೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕ್ರಿ.ಶ.1340ರಲ್ಲಿ ಹೊಯ್ಸಳ ಬಳ್ಳಾಲರು ಈ ಬೆಟ್ಟಕ್ಕೆ ಸಾವಂದಿ ಎಂದು ಹೆಸರು ಇಟ್ಟಿದ್ದರು.

ಈ ಬೆಟ್ಟವು ಸರಾಸರಿ ಸಮುದ್ರ ಮಟ್ಟದಿಂದ 1226 ಮೀ ಎತ್ತರದಲ್ಲಿದೆ ಮತ್ತು ಇದು ಡೆಕ್ಕನ್ ಪ್ರಸ್ಥಭೂಮಿಯ ಭಾಗವಾಗಿದೆ. ಈ ಪರ್ವತವು ಪೆನಿನ್ಸುಲರ್ ನೈಸ್, ಗ್ರಾನೈಟ್ಸ್, ಮೂಲ ಡೈಕ್ಸ್ ಮತ್ತು ಲ್ಯಾಟೈಟ್ಸ್ಗಳನ್ನು ಒಳಗೊಂಡಿದೆ. ಅರ್ಕಾವಾತಿ ನದಿಯನ್ನು ಈ ಭಾಗದಿಂದ ನೋಡಬಹುದಾಗಿದೆ, ಇಲ್ಲಿ ಚಾರಣ ಸುಲಭವಾದ ಮತ್ತು ಸುಂದರವಾದದ್ದು, ಇಲ್ಲಿ ಕಮಲದ ಕೊಳವು ಕಾಣಸಿಗುತ್ತದೆ ಮತ್ತು ಟ್ರೆಕಿಂಗ್, ಕ್ಯಾಂಪಿಂಗ್ ಮತ್ತು ರಾಕ್ ಕ್ಲೈಂಬಿಂಗ್ ಗಳನ್ನು ಪ್ರೀತಿಸುವ ಜನರು ಆಗಾಗ ಭೇಟಿ ನೀಡುತ್ತಿರುತ್ತಾರೆ.

ಹೋಗುವ ದಾರಿ, ಸ್ಟಾರ್ಟ್ ಪಾಯಿಂಟ್: ಬೆಂಗಳೂರು ತಲುಪುವ ಸ್ಥಳ, ಸಾವನದುರ್ಗಕ್ಕೆ ಭೇಟಿ ನೀಡಲು ಸೂಕ್ತ ಸಮಯ: ನವೆಂಬರ್ ನಿಂದ ಜೂನ್ ವಿಮಾನದ ಮೂಲಕ ತಲುವುದು ಹೇಗೆ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣ ಇಲ್ಲಿಗೆ ಹತ್ತಿರದ ವಿಮಾನನಿಲ್ದಾಣ, ಇದು ಸುಮಾರು 91 ಕಿ.ಮೀ ದೂರದಲ್ಲಿದೆ. ಈ ವಿಮಾನನಿಲ್ದಾಣಕ್ಕೆ ದೇಶದ ಮತ್ತು ವಿದೇಶದ ಪ್ರಮುಖ ನಗರಗಳಿಂದ ಉತ್ತಮ ಸಂಪರ್ಕವಿದೆ. ರೈಲಿನ ಮೂಲಕ: ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಹತ್ತಿರದ ರೈಲೆ ನಿಲ್ದಾಣವಾಗಿದೆ. ಇದು 66 ಕಿ.ಮೀದೂರದಲ್ಲಿದೆ. ಈ ರೈಲ್ವೆ ನಿಲ್ದಾಣದಿಂದ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕವಿದೆ. ರಸ್ತೆಯ ಮೂಲಕ: ಸಾವನದುರ್ಗಕ್ಕೆ ತಲುಪಲು ಅತ್ಯುತ್ತಮ ಮಾರ್ಗವೆಂದರೆ ಅದು ರಸ್ತೆಯ ಮೂಲಕ. ಮಾಗಡಿ ನಗರಕ್ಕೆ ರಸ್ತೆಯ ಮೂಲಕ ಉತ್ತಮ ಸಂಪರ್ಕವಿದೆ, ಅಲ್ಲದೇ ಬಸ್ ವ್ಯವಸ್ಥೆ ಧಾರಾಳವಾಗಿದೆ. ಬೆಂಗಳೂರಿನಿಂದ ಮಾಗಡಿಗೆ ಬೆಟ್ಟದಿಂದ ಇಪ್ಪತ್ತು ಕಿ,ಮೀ. ವಾಹನದ ಮೂಲಕ ಹೋಗುವುದಾದರೆ ಬೆಂಗಳೂರಿನಿಂದ ಸಾವನದುರ್ಗಕ್ಕೆ 56 ಕಿ.ಮೀ. ಸಾವನದುರ್ಗಕ್ಕೆ ಬೆಂಗಳೂರಿನಿಂದ ಹೋಗಲು ಎರಡು ಮಾರ್ಗವಿದೆ:

ರೂಟ್ 1: ಬೆಂಗಳೂರು – ಕೆಂಗೇರಿ-ಕುಂಬಳಗೋಡು-ಮಂಚನಬೆಲೆ- ಸಾವನದುರ್ಗ ವಯಾ ಸಾವನದುರ್ಗ – ಮಂಚನಬೆಲೆ

ರೂಟ್ 2: ಬೆಂಗಳೂರು – ವಿಶ್ವೇಶ್ವರಪುರ – ಗುಡೇಮಾರನಹಳ್ಳಿ, ಮಾಗಡಿ, ಸಾವನದುರ್ಗ, ರಾಜ್ಯ ಹೆದ್ದಾರಿ ಮೂರರ ಮೂಲಕ ಸಾವನದುರ್ಗ. ಮೊದಲನೇ ಮಾರ್ಗದಲ್ಲಿ ಹೋಗಲು ಬಯಸುವವರು – ಬೆಂಗಳೂರಿನಿಂದ ರಾ.ಹೆ. 75ರ ಮೂಲಕ ಸರಿಸುಮಾರು ಎರಡು ಗಂಟೆಯ ಪ್ರಯಾಣ ಸಾವನದುರ್ಗಕ್ಕೆ. ಈ ಮಾರ್ಗದಲ್ಲಿ ಕೆಂಗೇರಿ, ಮಂಚನಬೆಲೆ ಮುಂತಾದ ಪ್ರದೇಶಗಳನ್ನು ಹಾದುಹೋಗಬೇಕಾಗಿದೆ. ಈ ರಸ್ತೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ, ಬೆಂಗಳೂರಿನಿಂದ 56 ಕಿ.ಮೀ ದೂರದಲ್ಲಿರುವ ಸಾವನದುರ್ಗವನ್ನು, ಈ ರಸ್ತೆ ಚೆನ್ನಾಗಿರುವ ಕಾರಣ ಬೇಗ ಕ್ರಮಿಸಬಹುದಾಗಿದೆ. ಎರಡನೇ ಮಾರ್ಗದಲ್ಲಿ ಹೋಗಲು ಬಯಸುವವರು – ಬೆಂಗಳೂರಿನಿಂದ ರಾ.ಹೆ. 3ರ ಮೂಲಕ ಸರಿಸುಮಾರು ಎರಡುವರೆ ಗಂಟೆಯ ಪ್ರಯಾಣ ಸಾವನದುರ್ಗಕ್ಕೆ, ಇದು ಎಪ್ಪತ್ತು ಕಿ.ಮೀ ವ್ಯಾಪ್ತಿಯದ್ದು.