ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2149ಕ್ಕೆ ಏರಿಕೆ

17/09/2020


ಮಡಿಕೇರಿ ಸೆ.17 : ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 29 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 23 ಸೇರಿದಂತೆ ಒಟ್ಟು 52 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಸೋಮವಾರಪೇಟೆ ಕುಸ್ಬೂರು ಗ್ರಾಮದ ಗಾಲ್ಫ್ ಗ್ರೌಂಡ್ ಸಮೀಪದ 59 ವರ್ಷದ ಪುರುಷ. ಕುಶಾಲನಗರ ಕರಿಯಪ್ಪ ಬಡಾವಣೆ 55 ವರ್ಷದ ಮಹಿಳೆ ಮತ್ತು 35 ವರ್ಷದ ಪುರುಷ. ಕುಶಾಲನಗರ ಓಂಕಾರ್ ಬಡಾವಣೆಯ 27 ವರ್ಷದ ಪುರುಷ. ಕುಶಾಲನಗರ ಕುಡ್ಲೂರುವಿನ ಯೂನಿಕ್ ಅಕಾಡಮಿ ಶಾಲೆ ಸಮೀಪದ 51 ವರ್ಷದ ಪುರುಷ.
ಕುಶಾಲನಗರ ಕುಡ್ಲೂರುವಿನ ಯೂನಿಕ್ ಅಕಾಡಮಿ ಶಾಲೆ ಸಮೀಪದ 35 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಚೆಟ್ಟಳ್ಳಿ ಶ್ರೀಮಂಗಲ ಚೇರಲದ 29 ವರ್ಷದ ಮಹಿಳೆ. ನಾಪೆÇೀಕ್ಲು ಚೆರಿಯಪರಂಬು ಸರ್ಕಾರಿ ಶಾಲೆ ಸಮೀಪದ 52 ವರ್ಷದ ಪುರುಷ ಮತ್ತು 20 ವರ್ಷದ ಮಹಿಳೆ. ಕುಶಾಲನಗರ ಮಾದಪಟ್ಟಣದ ಎಂಜಿನಿಯರಿಂಗ್ ಕಾಲೇಜು ಎದುರಿನ 58 ವರ್ಷದ ಪುರುಷ.
ಸೋಮವಾರಪೇಟೆ ತಾಳತ್ತರ ಶೆಟ್ಟಳ್ಳಿಯ ಬೈರವೇಶ್ವರ ದೇವಾಲಯ ಸಮೀಪದ 32 ವರ್ಷದ ಮಹಿಳೆ ಮತ್ತು 6 ವರ್ಷದ ಬಾಲಕ. ವಿರಾಜಪೇಟೆ ಅರಮೇರಿ ಗ್ರಾಮ ಮತ್ತು ಅಂಚೆಯ 35 ವರ್ಷದ ಪುರುಷ, 52 ವರ್ಷದ ಮಹಿಳೆ, 34 ವರ್ಷದ ಪುರುಷ ಮತ್ತು 9 ವರ್ಷದ ಮಹಿಳೆ. ಮಡಿಕೇರಿ ಭಾಗಮಂಡಲ ಬಿಸಿಎಂ ಹಾಸ್ಟೆಲ್ ಸಮೀಪದ 28 ವರ್ಷದ ಪುರುಷ.
ವಿರಾಜಪೇಟೆ ಮೀನ್ ಪೇಟೆಯ ಮುತ್ತಪ್ಪ ದೇವಾಲಯ ಸಮೀಪದ 30 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ. ಸೋಮವಾರಪೇಟೆ ಗೋಣಿಮರೂರು ಅಂಚೆಯ ಗಣಗೂರು ಗ್ರಾಮದ 54 ವರ್ಷದ ಪುರುಷ.
ವಿರಾಜಪೇಟೆ ಕೆದಮುಳ್ಳೂರು ಕ್ರಿಶ್ಚಿಯನ್ ಕಾಲೋನಿಯ 49,19 ವರ್ಷದ ಮಹಿಳೆ, 17 ಮತ್ತು 15 ವರ್ಷದ ಬಾಲಕಿಯರು. ಮಡಿಕೇರಿ ತ್ಯಾಗರಾಜ ಕಾಲೋನಿಯ ಗಣಪತಿ ದೇವಾಲಯ ಸಮೀಪದ 69 ವರ್ಷದ ಮಹಿಳೆ. ಮಡಿಕೇರಿ ತಾಳತ್ತಮನೆಯ 78 ವರ್ಷದ ಪುರುಷ. ಮಡಿಕೇರಿ ಚೈನ್ ಗೇಟ್ ವಸತಿಗೃಹದ ಸಮೀಪದ 40 ವರ್ಷದ ಪುರುಷ. ಮಡಿಕೇರಿ ಪೆನ್ ಷನ್ ಲೈನಿನ ಟೌನ್ ಹಾಲ್ ಹಿಂಭಾಗದ 4 ವರ್ಷದ ಬಾಲಕಿ ಮತ್ತು 31 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ಹೆಗ್ಗಳ ಅಂಚೆಯ ಬುದಿಮಾಳ ಗ್ರಾಮದ 23 ವರ್ಷದ ಮಹಿಳೆ. ಬಿಟ್ಟಂಗಾಲದ ರೋಟರಿ ಶಾಲೆ ಸಮೀಪದ 41 ವರ್ಷದ ಪುರುಷ.
ಮಡಿಕೇರಿ ಬೊಯಿಕೇರಿಯ ನೀರುಕೊಲ್ಲಿ ಗ್ರಾಮದ ಇಬ್ನಿವಳವಾಡಿಯ 28 ವರ್ಷದ ಪುರುಷ. ಜಯನಗರದ ಶಾಂತಿನಿಕೇತನ ರಸ್ತೆಯ 54 ವರ್ಷದ ಪುರುಷ. ಡೈರಿ ಫಾರಂ 2ನೇ ಹಂತದ 68 ವರ್ಷದ ಪುರುಷ ಮತ್ತು 59 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಕುಶಾಲನಗರ ಬಲಮುರಿ ದೇವಾಲಯ ರಸ್ತೆಯ ನಾಗೇಗೌಡ ಬಡಾವಣೆಯ 53 ವರ್ಷದ ಮಹಿಳೆ. ಕರಿಯಪ್ಪ ಬಡಾವಣೆಯ 40 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕಿ. ಕರಿಯಪ್ಪ ಬಡಾವಣೆಯ 4ನೇ ಬ್ಲಾಕಿನ 70 ವರ್ಷದ ಮಹಿಳೆ.
ಸೋಮವಾರಪೇಟೆ ಕೊಡ್ಲೀಪೇಟೆಯ ಬೆಂಬಳೂರುವಿನ ಸರ್ಕಾರಿ ಶಾಲೆ ಸಮೀಪದ 28 ವರ್ಷದ ಮಹಿಳೆ. ದೊಡ್ಡ ಕೊಡ್ಲೀಪೇಟೆಯ 21 ವರ್ಷದ ಮಹಿಳೆ. ಯಡವನಾಡುವಿನ 96 ವರ್ಷದ ಮಹಿಳೆ. ಮಾವಿನಕಟ್ಟೆಯ 49 ಮತ್ತು 30 ವರ್ಷದ ಮಹಿಳೆ. ಚೌಡ್ಲುವಿನ ಜೂನಿಯರ್ ಕಾಲೇಜು ಸಮೀಪದ 45 ವರ್ಷದ ಪುರುಷ, 60 ವರ್ಷದ ಮಹಿಳೆ ಮತ್ತು 5 ವರ್ಷದ ಬಾಲಕಿ. ರೇಂಜರ್ ಬ್ಲಾಕಿನ 67 ವರ್ಷದ ಮಹಿಳೆ. ಸುಂಟಿಕೊಪ್ಪ 7ನೇ ಹೊಸ ಕೋಟೆಯ ಅಂದಗೋವೆ ಅಂಚೆ ಕಚೇರಿ ಸಮೀಪದ 27 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಕುರ್ಚಿಯ 25 ವರ್ಷದ ಪುರುಷ. ಹಾಸನದ ಅರಕಲಗೂಡುವಿನ 48 ವರ್ಷದ ಪುರುಷ ಮತ್ತು 24 ವರ್ಷದ ಮಹಿಳೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2149 ಆಗಿದ್ದು, 1720 ಮಂದಿ ಗುಣಮುಖರಾಗಿದ್ದಾರೆ. 399 ಸಕ್ರಿಯ ಪ್ರಕರಣಗಳಿದ್ದಿ, 30 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 336 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.