ಬಡ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಿದ ಕೊಡಗು ಜೆಡಿಎಸ್

17/09/2020

ಮಡಿಕೇರಿ ಸೆ.17 : ಕುಶಾಲನಗರ ಸಂತೆ ಮಾರುಕಟ್ಟೆ ಬಳಿ ಗುಡಿಸಲುಗಳಲ್ಲಿ ವಾಸವಿರುವ ಬಡ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಪಡಿತರ ಕಿಟ್ ವಿತರಣೆ ಮಾಡಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಖ್ ಖಾನ್, ಜೆಡಿಎಸ್‍ನ ರಾಜ್ಯ ಹಿರಿಯ ಮುಖಂಡ ಎಂ.ಎಂ.ಶರೀಫ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್, ಖಜಾಂಚಿ ಡೆನ್ನಿ ಬರೋಸ್, ಕಾರ್ಯದರ್ಶಿ ಸುನಿಲ್, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ, ಜಿಲ್ಲಾ ಮುಖಂಡ ರಘು ಮತ್ತಿತರರು ಹಾಜರಿದ್ದರು.