ಮೋದಿ ಬರ್ತ್‍ಡೇಗೆ 770 ಕೆಜಿ ಕೇಕ್

September 18, 2020

ಸೂರತ್ ಸೆ.17 : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳು ನಡೆದವು. ಗುಜರಾತ್ ರಾಜ್ಯದ ಸೂರತ್ ಬೇಕರಿಯೊಂದು 71 ಅಡಿ ಉದ್ದದ, 770 ಕೆಜಿ ತೂಕದ ಕೊರೋನಾ ವಾರಿಯರ್ ಥೀಮ್’ನೊಂದಿಗೆ ವಿಶೇಷ ಕೇಕ್ ವೊಂದನ್ನು ಸಿದ್ಧಪಡಿಸಿತು.
ಕೇಕ್ ತಯಾರಿಸಿರುವ ಬೇಕರಿಯು ಡಿಜಿಟಲ್ ಕಾರ್ಯಕ್ರವನ್ನು ಕೂಡ ಹಮ್ಮಿಕೊಂಡಿದ್ದು, ಕೇಕ್ ಕಟ್ಟಿಂಗ್ ಕಾರ್ಯಕ್ರಮವನ್ನು ಡಿಜಿಟಲ್ ಮೂಲಕ ಪ್ರಸಾರ ಮಾಡಿದೆ. ಕೇಕ್ ಕತ್ತರಿಸಿದ ಬಳಿಕ ಮಕ್ಕಳಿಗೆ ಹಂಚಿದೆ.
ಕಳೆದ 3 ವರ್ಷಗಳಿಂದಲೂ ಬ್ರೆಡ್ ಲೈನರ್ ಬೇಕರಿ ಮೋದಿಯವರು ಜನ್ಮದಿನಾಚರಣೆಯನ್ನು ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಆಚರಿಸಿಕೊಂಡು ಬರುತ್ತಿದೆ. ಈ ಬಾರಿ ಕೊರೋನಾ ವಾರಿಯರ್ಸ್’ಗಳಿಗೆ ಧನ್ಯವಾದ ಹೇಳುವ ಸಲುವಾಗಿ ಕೇಕ್ ತಯಾರಿಸಿದ್ದು, ಈ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದೆ.