ಭಾರತ, ಚೀನಾ ಗಡಿ ಬಿಕ್ಕಟ್ಟು ತೀವ್ರ
18/09/2020

ನವದೆಹಲಿ ಸೆ.18 : ಗಡಿಯಲ್ಲಿ ಭಾರತ-ಚೀನಾ ನಡುವೆ ಗಡಿ ಬಿಕ್ಕಟ್ಟು ತಾರಕಕ್ಕೇರಿದೆ. ಈ ನಡುವೆ ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗೊಂದು ಕಾಣಿಸಿಕೊಂಡಿದ್ದು, ಭಾರತೀಯ ನೌಕಾಪಡೆ ಕಂಡು ಹೆದರಿ ಹಿಂದಕ್ಕೆ ಹೋಗಿದೆ.
ಮಲಕ್ಕಾ ಜಲಸಂಧಿಯಲ್ಲಿ ಚೀನಾದ ಸಂಶೋಧನಾ ಹಡಗೊಂದು ಹಿಂದೂ ಮಹಾಸಾಗರದ ಭಾರತದ ಜಲಗಡಿಯೊಳಗೆ ಬಂದಿದ್ದು ಈ ಪ್ರದೇಶದಲ್ಲಿ ನೌಕಾಸೇನೆಯ ಯುದ್ಧ ಹಡಗನ್ನು ಕಂಡು ಚೀನಾದ ಹಡಗು ಹಿಂದಕ್ಕೆ ತೆರಳಿದೆ.
ಕಳೆದ ಆಗಸ್ಟ್ ನಲ್ಲಿ ಚೀನಾದ ಯುವಾನ್ ವಾಂಗ್ ಹಡಗು ಭಾರತದ ಜಲಗಡಿಯೊಳಗೆ ಪ್ರವೇಶಿಸಿತ್ತು ಎಂದು ನೌಕಾಪಡೆ ಇದೀಗ ದೃಢಪಡಿಸಿದೆ.
