ಟಿ. ಶೆಟ್ಟಿಗೇರಿಯಲ್ಲಿ ಡಿಸಿಸಿ ಬ್ಯಾಂಕ್‍ನ ನೂತನ ಕಟ್ಟಡ ಉದ್ಘಾಟನೆ

18/09/2020

ಮಡಿಕೇರಿ ಸೆ. 18 : ಟಿ.ಶೆಟ್ಟಿಗೇರಿಯಲ್ಲಿ ಡಿ.ಸಿ.ಸಿ ಬ್ಯಾಂಕ್‍ನ ನೂತನ ಕಟ್ಟಡವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಿದರು.
ಈ ಸಂದರ್ಭ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಡಿ.ಸಿ.ಸಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಸಲೀಂ, ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಸದಸ್ಯರಾದ ಪಟ್ರಪಂಡ ರಘು ನಾಣಯ್ಯ, ಕುಞ್ಞಂಗಡ ಅರುಣ್ ಭೀಮಯ್ಯ, ಹೊಟ್ಟೆಂಗಡ ರಮೇಶ್, ಕೊಲತಂಡ ಸುಬ್ರಹ್ಮಣಿ, ಸತೀಶ್ ಕುಮಾರ್, ಉಷಾ ತೇಜಸ್ವಿ, ಭರತ್ ಕುಮಾರ್, ಡಿ.ಕೆ ಚಿಣ್ಣಪ್ಪ, ತಾ. ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಚ್ಚಮಾಡ ಮುರುಳಿ, ತಾಲೂಕು ಕೃಷಿ ಮೋರ್ಚ ಕಟ್ಟೇರ ಈಶ್ವರ, ಬಿಜೆಪಿ ತಾಲೂಕು ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಮಂದಮಾಡ ತೇಜಪ್ಪ, ಕೊಟ್ರಂಗಡ ಸುಬ್ರಮಣಿ, ಕಟ್ಟಡ ಮಾಲೀಕರು ಮಚ್ಚಮಾಡ ಸಜನ್, ತಡಿಯಂಗಡ ಕರುಂಬಯ್ಯ, ಕುಞ್ಞಂಗಡ ಕೃಷ್ಣ, ಮಾಣೀರ ಉಮೇಶ್, ನಾಗವಂಡ ಕೃಪ, ಚೆಟ್ಟಂಗಡ ರಂಜು ಕರುಂಬಯ್ಯ, ಕಟ್ಟೇರ ನರೇಂದ್ರ, ಕಟ್ಟೇರ ಗಣೇಶ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.