ನೆಲಬೇವಿನ ಔಷಧಿ ಗುಣಗಳು

18/09/2020

ಪ್ರಾಚೀನ ಕಾಲದಿಂದ ಭಾರತೀಯ ಔಷಧಿ ಪದ್ಧತಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದೊಂದು ಚಿಕ್ಕಗಿಡವಾಗಿದ್ದು ಭಾರದೆಲ್ಲೆಡೆ ಬೆಳೆಯುತ್ತದೆ. ಹಿಮಾಲಯದ ಸಸ್ಯವಾದ ನೆಲಬೇವು ಚರಕ ಸಂಹತೆಯಲ್ಲಿ ಪದಾರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರಾತರು ಎಂಬ ಬುಡಕಟ್ಟು ಜನಾಂಗದವರಿಗೆ ಜ್ವರಕ್ಕೆ ಔಷಧಿಯಾಗಿ ಬಳಸಲಾಗುತ್ತಿತ್ತು. ಆದ್ದರಿಂದ ಇದನ್ನು ಸಂಸ್ಕೃತದಲ್ಲಿ ಕಿರಾತ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಲ್ಲದೇ ಇದು ಅತ್ಯಂತ ಕಹಿಯಾಗಿರುದರಿಂದ ಮಹಾತಿಕ್ತ ಎಂಬ ಹೆಸರೂ ಇದೆ.

ಉಪಯುಕ್ತ ಭಾಗಗಳು :
ನೆಲಬೇವಿನ ಪಂಚಾಂಗಗಳು ಅಂದರೆ ಬೇರು,ಕಾಂಡ,ಎಲೆ,ಹೂ,ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿವೆ.

ಔಷಧೀಯ ಗುಣಗಳು :
ಜ್ವರ: ಮಲೇರಿಯಾ,ಟೈಫಾಯ್ಡ್ ಮತ್ತು ಯವುದೇ ದೀರ್ಘಕಾಲೀನ ಜ್ವರದಲ್ಲಿಯೂ ನೆಲಬೇವು ತುಂಬಾ ಉಪಯುಕ್ತವಾದುದು.
ಕಾಲರಾ: ನೆಲಬೇವಿನ ಎಲೆಗಳರಸದೊಂದಿಗೆ ಬೇವು ಮತ್ತು ಅಮೃತಬಳ್ಳಿ ಎಲೆಗಳ ರಸವನ್ನು ಸಮಭಾಗ ತೆಗೆದುಕೊಂಡು ಅದಕ್ಕೆ ಜೇನು ಬೆರಸಿ ಕುಡಿಯುವುದರಿಂದ ಕಾಲರಾ ನಿಯಂತ್ರಣಕ್ಕೆ ಬರುತ್ತದೆ.
ಜಂತುಹುಳು : ಜಂತುಹುಳುವಿನ ತೊಂದರೆಯಿದ್ದಲ್ಲಿ ಪ್ರತಿದಿನ ರಾತ್ರಿಮಲಗುವ ಮುಂಚೆ ಏಳುದಿನಗಳ ಕಾಲ ನೆಲಬೇವಿನ ಕಷಾಯ ಕುಡಿಯಬೇಕು.
ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ನೆಲಬೇವಿನ ಕಷಾಯ ಕುಡಿಸಬೇಕು. ನೆಲಬೇವಿನ ಕಷಾಯಕ್ಕೆ ಜೇನು ಬೆರೆಸಿ ಕುಡಿಸಬಹುದು.
ಬಾಯಿಹುಣ್ಣಿನ ತೊಂದರೆ : ಬಾಯಿಹುಣ್ಣಿನ ತೊಂದರೆಯಿಂದ ಬಳಲುವವರು ನೆಲಬೇವಿನ ಕಾಂಡವನ್ನು ಒಂದು ರಾತ್ರಿ ಮಜ್ಜಿಗೆಯಲ್ಲಿ ನೆನೆಯಿಟ್ಟು ನಂತರ ಒಣಗಿಸಿ ಪುಡಿಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಒಂದು ಚಮಚೆಯಷ್ಟುತೆಗೆದುಕೊಂಡು ತುಪ್ಪದಲ್ಲಿ ಹುರಿದು ಊಟ ಮಾಡುವಾಗ ಅನ್ನದೊಂದಿಗೆ ಬೆರೆಸಿ ತಿನ್ನಬೇಕು.
ಕಾಮಾಲೆ ಮತ್ತು ಇತರ : ಯಕೃತ್ತಿನತೊಂದರೆಗಳಿಂದ ಬಳಲುವವರಿಗೆ ನೆಲಬೇವಿನ ಇಡೀ ಗಿಡದ ಕಷಾಯ ತುಂಬ ಉಪಯುಕ್ತ.
ಹಾವುಕಡಿತದಲ್ಲಿಯೂನೆಲಬೇವಿನ ಕಷಾಯ ತುಂಬ ಉಪಯುಕ್ತ.ಇದು ವಿಷಹರವಾಗಿ ಕೆಲಸ ಮಾಡುತ್ತದೆ.
ಅತಿರಕ್ತಸ್ರಾವ: ಸ್ತ್ರೀಯರಲ್ಲಿ ಮಾಸಿಕ ಸ್ರಾವವು ಅಧಿಕವಾಗುತ್ತಿದ್ದಲ್ಲಿ ನೆಲಬೇವಿನ ಕಷಾಯ ಮತ್ತು ಶ್ರೀಗಂಧದ ಕಷಾಯವನ್ನು ದಿನಕ್ಕೆ ೩ಬಾರಿ ಕುಡಿಯಬೇಕು.
ಸಕ್ಕರೆ ಕಾಯಿ : ಸಕ್ಕರೆ ಕಾಯಿಲೆಂದ ಬಳಲುವವರು:ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ನೆಲಬೇವಿನ ಎಲೆಗಳನ್ನು ಹಾಗೆಯೇ ತಿನ್ನಬಹುದು ಇಲ್ಲವೇ ನೆಲಬೇವಿನ ರಸ ಅಥವಾ ಕಷಾಯ ಸೇವನೆ ಮಾಡಿದಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ.
ಅರ್ಧ ತಲೆನೋವು: ನೆಲಬೇವು,ಅಮೃತಬಳ್ಳಿ,ಬೇವಿನ ತೊಗಟೆ,ಅರಶಿನ ಸಮವಾಗಿ ಬೆರಸಿ ಕುಟ್ಟಿಪುಡಿ ಮಾಡಿ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಯಬೇಕು.
ಎದೆಯುರಿ : ಎದೆಯುರಿ, ತಲೆಸುತ್ತುಇದ್ದಲ್ಲಿ ಕಾಲು ಚಮಚೆ ಒಣಗಿದ ನೆಲಬೇವಿನ ನಯವಾದ ಪುಡಿಗೆ ಸಕ್ಕರೆ ಇಲ್ಲವೇ ಜೇನುತುಪ್ಪ ಬೆರೆಸಿ ಸೇವಿಸಬೇಕು.