ವಿರಾಜಪೇಟೆಯಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ವಿಶ್ವಕರ್ಮ ಜಯಂತೋತ್ಸವ

18/09/2020

ವಿರಾಜಪೇಟೆ:ಸೆ:17: ನಿರಾಕಾರ ಪರಮಾತ್ಮನಾದ ಜಗತ್ತಿನ ಸೃಷ್ಟಿಕರ್ತನಾದ ಶ್ರೀ ವಿಶ್ವಕರ್ಮ ಜಯಂತೋತ್ಸವವನ್ನು ವಿಶ್ವಕರ್ಮ ಸಮುದಾಯದವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ವಿರಾಜಪೇಟೆಯ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ 19ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆಯನ್ನು ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಶ್ರಧ್ಧಾ ಭಕ್ತಿಯಿಂದ ನೆರೆವೇರಿಸಲಾಯಿತು.
ವಿಶ್ವಕರ್ಮ ಪೂಜೆಯ ಅಂಗವಾಗಿ ಮಂಗಳೂರಿನ ಪೂರೋಹಿತರಿಂದ ಬೆಳಗಿನಿಂದ ಗಣಪೂಜೆ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿತು.
ಕೋವಿಡ್ ಹಿನ್ನಲೆಯಲ್ಲಿ ಸರಳ ರೀತಿಯಲ್ಲಿ ಆರಂಭಗೊಂಡ ಪೂಜೆ ಮತ್ತು ಸೇವೆಗಳು ಸೇವಾ ಸಂಘದ ಅಧ್ಯಕ್ಷರಾದ ಕೆ.ಜಿ.ದಿವಾಕರ್ ಆಚಾರ್ಯ ಸಾನಿಧ್ಯದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ದಿವಾಕರ್ ಅಚಾರ್ಯ, ಸಮಾಜಕ್ಕೆ ವಿಶ್ವಕರ್ಮ ಕೊಡುಗೆ ಅಪಾರವಾದುದು. ವಿಶ್ವಕರ್ಮ ಸಮೂದಾಯದವರು ನಾಡಿನ ಎಲ್ಲಡೆ ವಾಸವಾಗಿದ್ದು, ರಕ್ತಗತವಾಗಿ ಬಂದ ವಿದ್ಯೆಗಳನ್ನು ಮುಂದಿನ ಪೀಳಿಗೆಗೆ ಧಾರೆಎರೆಯುವ ಕಾರ್ಯವಾಗಬೇಕು. ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳು ಸಮೂದಾಯದವರಿಗೆ ಲಭಿಸಿದಲ್ಲಿ ಸಮಾಜವು ಉನ್ನತೀಕರಣಗೊಳ್ಳುತ್ತದೆ. ಸಂಘಟನೆಯ ಮೂಲಕ ಸೇವಾ ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯರು ಕಾರ್ಯಪ್ರವತ್ತರಾಗಬೇಕು ಎಂದು ಹೇಳಿದರು.
ಪೂರೋಹಿತರಿಂದ ನಡೆಸಲಾದ ಪೂಜೆಗಳು ಮುಗಿದ ಪ್ರಸಾದ ವಿನಿಯೋಗ ನಡೆದು ನಂತರದಲ್ಲಿ ಲಘು ಉಪಹಾರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸೇವಾ ಸಂಘದ ಉಪಧ್ಯಕ್ಷರಾದ ಎ.ಎ ವಾಗೀಶ ಆಚಾರ್ಯ, ಕೆ.ಜೆ. ರವೀಂದ್ರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕೆ.ಜೆ ರಾಜೇಶ್ ಆಚಾರ್ಯ, ಸಹ ಕಾರ್ಯದರ್ಶಿಗಳಾದ ಎ.ಎ ಭವಾನಿ ಶಂಕರ್ ಆಚಾರ್ಯ, ಟಿ.ಎಸ್. ಮಂಜುನಾಥ್ ಆಚಾರ್ಯ, ವಿಮಲ ದಶರಥ, ಎ.ಪಿ.ಲೋಕೇಶ್ ಆಚಾರ್ಯ ಮತ್ತು ಸಂಘದ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಮೂದಾಯದ ಜನಾಂಗ ಬಂದುಗಳು ಪೂಜೋತ್ಸವದಲ್ಲಿ ಭಾಗವಹಿಸಿ ವಿಶ್ವಕರ್ಮ ತೀರ್ಥ ಪ್ರಸಾದ ಸ್ವೀಕರಿಸಿ ಪುನಿತರಾದರು.