ಹಿಂದಿ ಶಿಕ್ಷಕರ ನೇಮಕಾತಿ : ಆಯ್ಕೆ ಪಟ್ಟಿ ಪ್ರಕಟ
18/09/2020

ಮಡಿಕೇರಿ ಸೆ.18 : 2014-15ನೇ ಸಾಲಿನ ಪ್ರೌಢ ಶಾಲಾ ಹಿಂದಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ್ದ ರಿಟ್ ಅರ್ಜಿ ಸಂಖ್ಯೆ:12430/2017 ಕ್ಕೆ 2019ರ ಸೆಪ್ಟೆಂಬರ್, 18 ರಂದು ಘನ ನ್ಯಾಯಾಲಯ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ನ್ಯಾಯಾಲಯವು ಆದೇಶಿಸಿದೆ. ಅದರಂತೆ 2015ರ ಆಗಸ್ಟ್, 14 ರಂದು ಪ್ರಕಟಿಸಲಾದ 1:2 ತಾತ್ಕಾಲಿಕ ಪಟ್ಟಿಯನ್ನಾಧರಿಸಿ 2002ರ ವೃಂದ ಮತ್ತು ನೇಮಕಾತಿ ನಿಯಮದಂತೆ ಸಿದ್ಧಪಡಿಸಲಾದ 1:1 ಪರಿಷ್ಕøತ ವಿಭಾಗವಾರು ಧೃಢೀಕೃತ ಆಯ್ಕೆ ಪಟ್ಟಿಯನ್ನು ಆಯ್ಕೆ ಪ್ರಾಧಿಕಾರಿಗಳಾದ ವಿಭಾಗೀಯ ಕಾರ್ಯದರ್ಶಿಗಳ ಕಚೇರಿ ಮ್ಯೆಸೂರು ಇಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ 2020ರ ಸೆಪ್ಟೆಂಬರ್, 22 ರೊಳಗೆ ರಜಾ ದಿನಗಳನ್ನು ಹೊರತುಪಡಿಸಿ ಖುದ್ದಾಗಿ ಮ್ಯೆಸೂರು ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.
