ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳಿಗೆ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪತ್ರ ವಿತರಣೆ

18/09/2020

ಮಡಿಕೇರಿ ಸೆ.18 : ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪ್ರಶಸ್ತಿ ಪತ್ರವನ್ನು ವಿತರಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೈಡ್ ವಿದ್ಯಾರ್ಥಿಗಳಾದ ಕೆ.ಕೆ.ಲಿಶ್ಯಾ ಕಾವೇರಮ್ಮ, ಸ್ಕೌಟ್ ವಿದ್ಯಾರ್ಥಿಗಳಾದ ತಕ್ಷನ್ ತಿಮ್ಮಯ್ಯ ಎಂ.ಬಿ, ಧ್ಯಾನ್ ಪೂವಣ್ಣ, ಜೀವಿತ್ ಸಿಕ್ವೇರಾ ಅವರಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಆಯುಕ್ತರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೊ, ಸ್ಕೌಟ್ ಆಯುಕ್ತರಾದ ಜಿಮ್ಮಿ ಸಿಕ್ವೇರಾ, ರಾಜ್ಯ ಪ್ರತಿನಿಧಿ ಹಾಗೂ ಕುಶಾಲಾನಗರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ದೇವಾನಂದ, ಸಂತ ಅನ್ನಮ್ಮ ಶಾಲೆಯ ಸ್ಕೌಟ್ ಮಾಸ್ಟರ್ ಕ್ಲೆಮೆಂಟ್ ಮ್ಯಾಕ್ಲಿನ್, ಎಸ್‍ಎಂಎಸ್ ಶಾಲೆಯ ಸ್ಕೌಟ್ ಮಾಸ್ಟರ್ ಭೀಮಯ್ಯ, ಗುಡ್ ಶಫರ್ಡ್ ಶಾಲೆಯ ಸ್ಕೌಟ್ ಮಾಸ್ಟರ್ ಗಣೇಶ್ ಹಾಗೂ ಜಿಲ್ಲಾ ಸಂಘಟರಾದ ದಮಯಂತಿ ಇತರರು ಭಾಗವಹಿಸಿದ್ದರು.