ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ : ಸುಂಟಿಕೊಪ್ಪದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಿಹಿ ಹಂಚಿಕೆ

September 19, 2020

ಸುಂಟಿಕೊಪ್ಪ,ಸೆ.19: ಸುಂಟಿಕೊಪ್ಪ ನಗರ ಬಿಜೆಪಿ ಹಾಗೂ ಯುವ ಮೋರ್ಚಾ ವತಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿಹಿ ತಿಂಡಿಯನ್ನು ವಿತರಿಸಿದರು.
ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಪಟ್ಟಣದ ಅಂಗಡಿ ಮುಗ್ಗಟ್ಟು, ಸ್ವಸ್ಥ ಶಾಲೆ, ಸುಂಟಿಕೊಪ್ಪ ಪೊಲೀಸ್‍ಠಾಣೆ ಹಾಗೂ ಜನ ವಿಕಾಸ ವೃದ್ಧಾಶ್ರಮಕ್ಕೆ ತೆರಳಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ವಾಸು, ಬಿ.ಕೆ.ಪ್ರಶಾಂತ್, ನಗರ ಯುವಮೋರ್ಚಾ ಅಧ್ಯಕ್ಷ ವಿಘ್ನೇಶ್, ನಿಕಟಪೂರ್ವ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಬಿ.ಐ.ಭವಾನಿ,ಮಾಜಿ ಸದಸ್ಯ ಸಿ.ಚಂದ್ರ, ಒಬಿಸಿ ಅಧ್ಯಕ್ಷ ಸುನಿಲ್ ಕುಮಾರ್ ಸಿ.ಸಿ., ಕೃಷಿ ಮೋರ್ಚಾ ಅಧ್ಯಕ್ಷರಾದ ರಮೇಶ್ ಪಿಳ್ಳೆ, ಪ್ರಮುಖರಾದ ಪುನೀತ್ ಕುಮರ್, ಪ್ರಶಾಂತ್,ಕನೀಶ್, ಶ್ರಿರಾಮ ರೈ, ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪಿ.ಸಿ.ಮೋಹನ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತಿತರರು ಇದ್ದರು.