ಹೆಗ್ಗಳ ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವಿನ ರಕ್ಷಣೆ

19/09/2020

ಮಡಿಕೇರಿ ಸೆ. 19 : ಭಾರೀ ಗಾತ್ರದ ಹೆಬ್ಬಾವೊಂದು ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ ಗ್ರಾಮದಲ್ಲಿ ಸೆರೆಯಾಗಿದೆ. ಗ್ರಾಮದ ಪಿ.ಎಚ್.ಸದಾನಂದ ಎಂಬುವವರ ಕಾಫಿ ತೋಟದಲ್ಲಿ ಗಿಡಗಳ ಮಧ್ಯದಲ್ಲಿದ್ದ 12 ಅಡಿ ಉದ್ದದ ಹೆಬ್ಬಾವನ್ನು ಉರಗ ತಜ್ಞ ಶರತ್ ಹಾಗೂ ಅವರ ತಂಡ ರಕ್ಷಣೆ ಮಾಡಿ ಮಾಕುಟ್ಟ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

ಕಳೆದ ಹಲವು ವರ್ಷಗಳಿಂದ ಹಾವುಗಳ ರಕ್ಷಣೆ ಮಾಡುತ್ತಿರುವ ಶರತ್ ಅವರು ಇಲ್ಲಿಯವೆರೆಗೆ 4 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಹಾವುಗಳ ಬಗ್ಗೆ ಜನರಿಗೆ ಇರುವ ಕೆಲವು ತಪ್ಪು ತಿಳುವಳಿಕೆಗಳ ಬಗ್ಗೆ ಶರತ್ ಇದೇ ಸಂದರ್ಭ ಜಾಗೃತಿ ಮೂಡಿಸಿದರು. ಹಾವು ಕಂಡರೆ ಕೊಲ್ಲಬೇಡಿ, ನಮಗೆ ಮಾಹಿತಿ ನೀಡಿ, ನಾವು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡುತ್ತೇವೆ ಎಂದು ಶರತ್ ತಿಳಿಸಿದರು.