ಲಾಕ್‍ಡೌನ್ ದಿನಗಳಲ್ಲಿ ವಿದ್ಯಾರ್ಥಿನಿಯ ಪ್ರತಿಭೆಗೆ ಸಾಕ್ಷಿಯಾದ ಚಿತ್ರಕಲೆಗಳು

19/09/2020

ಮಡಿಕೇರಿ ಸೆ. 19 : ಈ ವಿದ್ಯಾರ್ಥಿನಿಗೆ, ಒಂದು ನೋಟ್‌ ಪುಸ್ತಕ, ಒಂದು ಸಾದಾ ಪೆನ್ಸಿಲ್ ಕೊಟ್ಟರೆ ಸಾಕು. ಅಚ್ಚರಿ ಮೂಡಿಸುವಂತಹ ಅದ್ಭುತ ಚಿತ್ರಗಳನ್ನು ಬಿಡಿಸುತ್ತಾರೆ. ಆ ಚಿತ್ರಗಳನ್ನು ನೋಡಿದರೆ, ಇವು ಯಾವುದೋ ನುರಿತ ಕಲಾವಿದನ ಕೈಯಲ್ಲಿ ಅರಳಿದ ಚಿತ್ತಾರಗಳಂತೆ ಕಾಣುತ್ತವೆ!
ಇದು ಮಡಿಕೇರಿಯ ಗೌಳಿ ಬೀದಿ ನಿವಾಸಿ ಗಣೇಶ್ ಶೆಣೈ ಮಗಳು ನಾಗಾಲಕ್ಣ್ಮಿ ಅವರ ಚಿತ್ರಕಲಾ ಕೌಶಲ್ಯದ ತುಣುಕು. ಈ ಪ್ರತಿಭೆ ಕೋವಿಡ್ ಲಾಕ್ ‌ಡೌನ್ ನಲ್ಲಿ ಮನೆಯಲ್ಲಿದ್ದ ಸಮಯವನ್ನು ಬಳಸಿಕೊಂಡು ಪೆನ್ಸಿಲ್ ನಿಂದ ಅದ್ಭುತ ಚಿತ್ರಗಳನ್ನು ಬಿಡಿಸಿದ್ದಾಳೆ. ನಾಗಾಲಕ್ಷ್ಮಿ ಶಾಲೆಯ ದಿನಗಳಲ್ಲೆ ಈ ಚಿತ್ರ ಬಿಡುಸುವ ಆಸಕ್ತಿ ಹೊಂದಿದ್ದಳು. ಕೋವಿಡ್ ಲಾಕ್ ಡೌನ್ ಸಮಯ ಬಳಸಿಕೊಂಡು ಕಲೆಗಾರಿಕೆಯತ್ತ ಒಲವು ಮೂಡಿಸಿ ಅದ್ಭುತ ಚಿತ್ರಗಳನ್ನು ಮೂಡಿಸಿದ್ದಾರೆ. ತನ್ನ ಸ್ನೆಹಿತರು, ಕುಟುಂಬದ ಸದಸ್ಯರ ಚಿತ್ರಗಳನ್ನು ಬಿಡುಸುತ್ತಿದ್ದ ನಾಗಾಲಕ್ಷ್ಮಿ ಇದೀಗ ವಿವಿಧ ಬಗೆಯ ಅತ್ಯುತ್ತಮ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಎಂ.ಕಾಂ ಅಂತಿಮ ವರ್ಷದ ವಿದ್ಯಾಭ್ಯಾಸ ಮಾಡುತ್ತಿರುವ ನಾಗಲಕ್ಷ್ಮೀಗೆ ಅಪ್ಪ ಗಣೇಶ್ ಶೆಣೈ, ಅಮ್ಮ ಸುಮನಾ ಶೆಣೈ ಪ್ರೋತ್ಸಾಹ ನೀಡುತ್ತಿದ್ದಾರೆ. ಮಗಳ ಚಿತ್ರ ಕಲೆ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿರುವದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದಾರೆ.