ಉಚಿತ ಶಿಕ್ಷಣ : ಜೂನಿಯರ್ ಶರೀಅತ್ ಕಾಲೇಜ್ ಗೆ ಪ್ರವೇಶಾತಿ ಆರಂಭ

ಮಡಿಕೇರಿ ಸೆ.19 : ಸುಂಟಿಕೊಪ್ಪದ ಮೊಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರೀಅತ್ ಕಾಲೇಜ್ ಗೆ ಪ್ರಸಕ್ತ(2020-21) ಸಾಲಿನ ಪ್ರಥಮ ಪಿಯುಸಿ ಪ್ರವೇಶಾತಿಯು ಪ್ರಾರಂಭಗೊಂಡಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಪ್ರವೇಶಾತಿ ನಡೆಸಲಾಗುವುದು ಎಂದು ಕಾಲೇಜ್ ನ ಆಡಳಿತ ಮಂಡಳಿಯ ಅಧ್ಯಕ್ಷ ಉಮ್ಮರ್ ಫೈಜಿ ಹಾಗೂ ಕಾರ್ಯದರ್ಶಿ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ತಿಳಿಸಿದ್ದಾರೆ.
ಶಿಕ್ಷಣ ಉಚಿತವಾಗಿರಲಿದ್ದು, ಹತ್ತನೇ ತರಗತಿ ಮತ್ತು ಧಾರ್ಮಿಕವಾಗಿ ಹತ್ತನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು ಎಂದು ಹೇಳಿದ್ದಾರೆ. ಕೊಡಗಿನ ಬಡ ಮತ್ತು ನಿರ್ಗತಿಕ ವರ್ಗಕ್ಕೆ ಸೇರಿದ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡುವ ನಿಟ್ಟಿನಲ್ಲಿ 2016ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಸುಮಾರು ನೂರರಷ್ಟು ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುತ್ತಿದೆ.
ಈ ಬಾರಿ ದ್ವೀತಿಯ ಪಿಯುಸಿಯಲ್ಲಿ ಶೇ.70 ರಷ್ಟು ಫಲಿತಾಂಶ ಪಡೆದಿರುವ ಜೂನಿಯರ್ ಶರೀ ಅತ್ ಕಾಲೇಜ್ ಉತ್ತಮ ರೀತಿಯ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದು, ಕಂಪ್ಯೂಟರ್ ತರಬೇತಿ, ಭಾಷಾ ಪರಿಜ್ಞಾನ ಹಾಗೂ ಇನ್ನಿತರ ವ್ಯಕ್ತಿಗತ ಶಿಕ್ಷಣವನ್ನು ನೀಡಲಾಗುತ್ತಿದೆ.
ಅಲ್ಲದೇ ಉನ್ನತ ಶಿಕ್ಷಣ ತಜ್ಞರಿಂದ ಪ್ರತಿ ತಿಂಗಳು ತರಬೇತಿಗಳನ್ನು ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಸೆ.21 ರಂದು ಬೆಳಗ್ಗೆ 10 ಗಂಟೆಯೊಳಗೆ ಸುಂಟಿಕೊಪ್ಪ ಕಾಲೇಜಿನ ಆವರಣದಲ್ಲಿ ನಡೆಯುವ ಪ್ರವೇಶಾತಿ ಪರೀಕ್ಷೆಗೆ ಹತ್ತನೇ ತರಗತಿಯ ಅಂಕಪಟ್ಟಿ ಹಾಗೂ ಆಧಾರ ಕಾರ್ಡ್‍ನೊಂದಿಗೆ ಹಾಜರಾಗುವಂತೆ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ತಿಳಿಸಿದ್ದಾರೆ. ಪ್ರವೇಶಾತಿ ಬಯಸುವವರು ಮೊ.ಸಂ : 78998 91494 ನ್ನು ಸಂಪರ್ಕಿಸಬಹುದಾಗಿದೆ.
