ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 20 ತಜ್ಞ ವೈದ್ಯರ ನೇಮಕ

September 19, 2020

ಮಡಿಕೇರಿ ಸೆ.19 : ಸರ್ಕಾರ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನಿಯೋಜನೆ ಮಾಡಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ ಅವರು ತಿಳಿಸಿದ್ದಾರೆ.
ಸಾಮಾನ್ಯ ವೈದ್ಯ ಶಾಸ್ತ್ರಜ್ಞರು 4, ಅರವಳಿಕೆ ತಜ್ಞರು 3, ಸ್ತ್ರೀರೋಗ ತಜ್ಞರು 2, ರೋಗಶಾಸ್ತ್ರ ತಜ್ಞರು 5, ಸೂಕ್ಷ್ಮ ರೋಗಾಣು ತಜ್ಞರು 1, ಸಮುದಾಯ ವೈದ್ಯಕೀಯ ತಜ್ಞರು 1 ಹಾಗೂ ಶ್ವಾಸಕೋಶ ತಜ್ಞರು 1 ಸೇರಿದಂತೆ ಒಟ್ಟು 20 ಮಂದಿ ತಜ್ಞ ವೈದ್ಯರಲ್ಲಿ 18 ಮಂದಿ ತಜ್ಞ ವೈದ್ಯರು ವರದಿ ಮಾಡಿಕೊಂಡಿದ್ದಾರೆ ಎಂದು ಕಾರ್ಯಪ್ಪ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೊಡಗು ಜಿಲ್ಲೆಯಲ್ಲಿ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇದ್ದು, ತಜ್ಞ ವೈದ್ಯರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದ್ದರು, ಈ ಹಿನ್ನೆಲೆ ಸರ್ಕಾರ 20 ಮಂದಿ ತಜ್ಞ ವೈದ್ಯರನ್ನು ನಿಯೋಜಿಸಿದ್ದು, ಇವರಲ್ಲಿ 18 ಮಂದಿ ತಜ್ಞ ವೈದ್ಯರು ವರದಿ ಮಾಡಿಕೊಂಡಿದ್ದಾರೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ ಅವರು ಹೇಳಿದ್ದಾರೆ.

error: Content is protected !!