ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆದ ಎ.ಎಸ್.ಪೊನ್ನಣ್ಣ : ಬಿಜೆಪಿ ಟೀಕೆ

19/09/2020

ಮಡಿಕೇರಿ ಸೆ.19 : ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಸದಸ್ಯತ್ವವನ್ನು ರದ್ದುಪಡಿಸುವಂತೆ ಒತ್ತಾಯಿಸಿರುವ ಕೆಪಿಸಿಸಿ ಮಾಹಿತಿ ಹಕ್ಕು ಘಟಕದ ರಾಜ್ಯಾಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷÀ ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಅಕ್ರಮ ಹಣ ಸಂಪಾದನೆಯ ಆರೋಪದ ಬಗ್ಗೆ ಪೆÇನ್ನಣ್ಣ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಶಿವಕುಮಾರ್ ಅವರ ಶಾಸಕ ಸ್ಥಾನವನ್ನೂ ರದ್ದು ಪಡಿಸಲು ಒತ್ತಾಯಿಸುತ್ತಾರೆಯೇ ಎಂದು ಪ್ರಶ್ನಿಸಿರುವ ಮಹೇಶ್ ಜೈನಿ, ಆರೋಪ ಸಾಬೀತಾದರಷ್ಟೇ ಆರೋಪಿ ಅಪರಾಧಿಯಾಗತ್ತಾರೆ, ಕಾನೂನಿನ ಬಗ್ಗೆ ಅರಿವಿರುವ ಕಾನೂನು ಘಟಕದ ಅಧ್ಯಕ್ಷರಿಗೆ ನಾವು ನೆನಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿ.ಪಿ.ಯೋಗೇಶ್ವರ್ ಅವರಿಬ್ಬರಿಗೂ ಕಾನೂನು ಒಂದೇ ಆಗಿದೆ, ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದು ತಿರುಗೇಟು ನೀಡಿದ್ದಾರೆ.
ಪೆÇಲೀಸ್ ಕಮೀಷನರ್ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯಲು ಸಾಧ್ಯವಿಲ್ಲವೆಂದು ಪೊನ್ನಣ್ಣ ಅವರು ಹೇಳಿಕೆ ನೀಡಿದ್ದಾರೆ. ಆದರೆ ಈ ದಂಧೆ ಇಂದು, ನಿನ್ನೆಯದಲ್ಲ ಎನ್ನುವುದು ಬಂಧಿತÀರ ತನಿಖೆಯಿಂದ ತಿಳಿದು ಬಂದಿದೆ.
ಬಿಜೆಪಿ ನೇತೃತ್ವದ ಸರ್ಕಾರ ನಿಷ್ಠಾವಂತ ಅಧಿಕಾರಿಗಳ ತಂಡದ ಮೂಲಕ ಡ್ರಗ್ಸ್ ಪ್ರಕರಣಗಳನ್ನು ಬೆಳಕಿಗೆ ತಂದು, ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಬೇರು ಬಿಟ್ಟಿದ್ದ ದಂಧೆಯನ್ನು ನಾಶ ಮಾಡಲು ಪಣತೊಟ್ಟಿದೆ. ಈ ಹಿಂದೆ ಭ್ರಷ್ಟ ಅಧಿಕಾರಿಗಳ ನೆರವಿನಿಂದ ನಡೆಯುತ್ತಿದ್ದ ದಂಧೆಗೆ ಸರ್ಕಾರ ಕಡಿವಾಣ ಹಾಕಿದ್ದು, ಪ್ರಕರಣವನ್ನು ಬೇಧಿಸಿರುವ ದಕ್ಷ ಅಧಿಕಾರಿಗಳ ಪ್ರಯತ್ನ ಪ್ರಶಂಸನೀಯವೆಂದು ಮಹೇಶ್ ಜೈನಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಇರುವಿಕೆಯನ್ನು ಸಾಬೀತು ಪಡಿಸುವುದಕ್ಕಾಗಿ ಮತ್ತು ಕೊಡಗಿನಲ್ಲಿ ತನ್ನ ರಾಜಕೀಯ ನೆಲೆ ಕಂಡುಕೊಳ್ಳುವ ಪ್ರಯತ್ನವಾಗಿ ಪೊನ್ನಣ್ಣ ಅವರು ಅರ್ಥಹೀನ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಟೀಕಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಕೊಡಗು ಜಿಲ್ಲೆ ಯಾವ ರಾಜ್ಯದಲ್ಲಿತ್ತೋ ಅದೇ ರಾಜ್ಯದಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.
ಕೊಡಗು ಜಿಲ್ಲೆ ಸೇರಿದಂತೆ ದೇಶದೆಲ್ಲೆಡೆ ಕೋವಿಡ್ ವ್ಯಾಪಿಸಿದ್ದು, ಸರ್ಕಾರದ ಸಮಯೋಚಿತ ನಿರ್ಧಾರಗಳಿಂದಾಗಿ ವೈರಸ್ ಹರಡುವಿಕೆ ನಿಯಂತ್ರಣದಲ್ಲಿದೆ. ಭೂ ಕುಸಿತ ಮತ್ತಿತರ ಅನಾಹುತಗಳಿಂದ ತೊಂದರೆ ಅನುಭವಿಸುತ್ತಿರುವ ಜಿಲ್ಲೆಯ ಜನತೆಯ ಸಮಸ್ಯೆಗಳಿಗೆ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ ಎಂದು ತಿಳಿಸಿರುವ ಮಹೇಶ್ ಜೈನಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹತಾಶ ಮನೋಭಾವನೆಯಿಂದ ಇಲ್ಲಸಲ್ಲದ ಆರೋಪ ಮಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಒತ್ತಾಯಿಸಿದ್ದಾರೆ.