ನೆರೆ ಸಂತ್ರಸ್ತರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಮನೆ ಹಸ್ತಾಂತರ

19/09/2020

ಮಡಿಕೇರಿ ಸೆ. 19 : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನೆರೆ ಸಂತ್ರಸ್ತ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು.
ಕುಶಾಲನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್‍ನ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಸಂತ್ರಸ್ತ ಕುಟುಂಬಕ್ಕೆ ಮನೆಯ ಕೀಲಿಕೈ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ಖಾದರ್ ಪುತ್ತೂರು, ಕೊಡಗು ಜಿಲ್ಲಾಧ್ಯಕ್ಷ ಅಮೀನ್ ಮುಹ್ಸಿನ್, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಎಚ್. ಅಬೂಬಕರ್, ಪಾಪ್ಯುಲರ್ ಫ್ರಂಟ್ ದ.ಕ. ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಬಂಗೇರ್ ಕಟ್ಟೆ, ನೂರ್ ಮಸ್ಜಿದ್ ಅಧ್ಯಕ್ಷ ನಿಝಮುದ್ದೀನ್, ಜಾಮಿಯಾ ಮಸ್ಜಿದ್ ಕಮಿಟಿ ಸದಸ್ಯ ಮುಹಮ್ಮದ್ ರಫೀಕ್, ಮುಸ್ಲಿಂ ಒಕ್ಕೂಟ ಅಧ್ಯಕ್ಷ ಹನೀಫ್, ಜನತಾ ಕಾಲನಿ ಮಸ್ಜಿದ್ ಇಮಾಮ್ ಮೌಲಾನಾ ಅಬ್ದುಲ್ ರಹ್ಮಾನ್, ಹಿಲಾಲ್ ಮಸ್ಜಿದ್ ಕಮಿಟಿಯ ಮಾಜಿ ಸದಸ್ಯ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.
ಈ ಕುಟುಂಬವು 2018ರಲ್ಲಿ ಸಂಭವಿಸಿದ್ದ ಪ್ರವಾಹದಲ್ಲಿ ಮನೆಮಾರನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು, ಸೂಕ್ತ ದಾಖಲೆಗಳಿಲ್ಲದ ಕಾರಣ ಸರಕಾರದಿಂದ ದೊರಕಬೇಕಾಗಿದ್ದ ನೆರೆ ಪರಿಹಾರದಿಂದ ವಂಚಿತವಾಗಿತ್ತು. ಸಂತ್ರಸ್ತ ಕುಟುಂಬದ ಸಂಕಷ್ಟವನ್ನು ಮನಗಂಡ ಪಾಪ್ಯುಲರ್ ಫ್ರಂಟ್, ಮನೆ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಿತ್ತು.

ಈ ಹಿಂದೆ ಮಡಿಕೇರಿಯಲ್ಲಿ ನೆರೆ ಸಂತ್ರಸ್ತ ಕುಟುಂಬವೊಂದು ಇದೇ ರೀತಿ ಸರ್ಕಾರದ ಪರಿಹಾರದಿಂದ ನಿರ್ಲಕ್ಷ್ಯಕ್ಕೊಳಗಾದ ಸಂದರ್ಭದಲ್ಲೂ ಪಾಪ್ಯುಲರ್ ಫ್ರಂಟ್ ಆ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ತೋರಿದೆ.