ಮಳೆ ಮಾತ್ರವಲ್ಲ ಗಾಳಿಯಿಂದಲೂ ಕಾಫಿ ಬೆಳೆ ನಾಶ

19/09/2020

ಮಡಿಕೇರಿ : ಕೊಡಗಿನಲ್ಲಿ ಪ್ರಸ್ತುತ ವರ್ಷ ಮಳೆಯಿಂದ ಮಾತ್ರವಲ್ಲ ಬಿರುಗಾಳಿಯಿಂದಲೂ ಕಾಫಿ ಬೆಳೆಗೆ ಹಾನಿಯಾಗಿದ್ದು, ಗಾಳಿಯಿಂದಾದ ನಷ್ಟವನ್ನು ಕೂಡ ಸರ್ಕಾರ ಪರಿಗಣಿಸಬೇಕೆಂದು ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖ ಹರೀಶ್ ಅಪ್ಪಯ್ಯ ಅವರು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು. ಭಾರೀ ಗಾಳಿ ಮಳೆಗೆ ಮರಗಳು ಬಿದ್ದು, ಕಾಫಿ ಗಿಡಗಳು ಸಂಪೂರ್ಣವಾಗಿ ನಾಶವಾಗಿ ಅಪಾರ ನಷ್ಟ ಉಂಟಾಗಿದೆ ಎಂದರು.