ಹೊಸ್ಕೇರಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ

19/09/2020

ಮಡಿಕೇರಿ : ಹೊಸ್ಕೇರಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬಂದಿದೆ. ಬೇರೆ ಊರಿನ ಮಂದಿ ಕಸ ತುಂಬಿದ ಚೀಲಗಳನ್ನು ನಮ್ಮ ಗ್ರಾಮದಲ್ಲಿ ತಂದು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮರಗೋಡು ಮತ್ತು ಅರೆಕಾಡು ರಸ್ತೆ ವ್ಯಾಪ್ತಿಯ ಒಂದು ಬದಿಯಲ್ಲಿ ತ್ಯಾಜ್ಯವನ್ನು ಸುರಿಯಲಾಗಿದ್ದು, ಅಶುಚಿತ್ವದ ವಾತಾವರಣ ಮೂಡಿದೆ. ಗ್ರಾ.ಪಂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.