ಭಾರೀ ಮಳೆಗೆ ಉದುರುತ್ತಿವೆ ಕಾಫಿ ಫಸಲು

19/09/2020

ಮಡಿಕೇರಿ ಸೆ.19 : ಕೊಡಗಿನಲ್ಲಿ ಕಾಫಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಕಾಫಿ ತೋಟಗಳಲ್ಲಿ ಕೊಳೆ ರೋಗದ ಭೀತಿ ಎದುರಾಗಿದ್ದು, ಕಾಫಿ ಕಾಯಿ ಬೀಳಲು ಆರಂಭವಾಗಿದೆ. ವನ್ಯಜೀವಿಗಳ ಹಾವಳಿ, ಹವಾಗುಣ ವೈಪರೀತ್ಯ, ದುಬಾರಿ ನಿರ್ವಹಣಾ ವೆಚ್ಚಗಳ ನಡುವೆ ಇದೀಗ ಅತಿಯಾದ ಮಳೆ ಮತ್ತೊಂದು ಸಂಕಷ್ಟವನ್ನು ತಂದೊಡ್ಡುವ ಮೂಲಕ ಬೆಳೆಗಾರರಿಗೆ ಅಪಾರ ನಷ್ಟವನ್ನುಂಟು ಮಾಡಿದೆ.