3 ವರ್ಷದ ಮಗುವನ್ನು ಕಾಡಿದ ಕೋವಿಡ್ : ಸೋಂಕಿತರ ಸಂಖ್ಯೆ 2271 ಕ್ಕೆ ಏರಿಕೆ

20/09/2020

ಮಡಿಕೇರಿ ಸೆ.20 : ಕೊಡಗು ಜಿಲ್ಲೆಯಲ್ಲಿ ಮಕ್ಕಳು ಮತ್ತು ಯುವ ಸಮೂಹದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಕಂಡು ಬರುತ್ತಿದ್ದು, ಇಂದು ವಿರಾಜಪೇಟೆಯ ಮೀನುಪೇಟೆ ಬಡಾವಣೆಯ 3 ವರ್ಷದ ಮಗುವಿನಲ್ಲಿ ಸೋಂಕು ದೃಢಪಟ್ಟಿದೆ. ಮಡಿಕೇರಿ ಕ್ಲಬ್ ಮಹೀಂದ್ರ ಬಳಿಯ 22 ಮತ್ತು 21 ವರ್ಷದ ಯುವಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಭಾಗಮಂಡಲದ ಭೂತನಕಾಡು ಗ್ರಾಮದ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರಲ್ಲಿ ಕೋವಿಡ್ ಪತ್ತೆಯಾಗಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2271 ಆಗಿದ್ದು, 1852 ಮಂದಿ ಗುಣಮುಖರಾಗಿದ್ದಾರೆ. 389 ಸಕ್ರಿಯ ಪ್ರಕರಣಗಳಿದ್ದು, 30 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 334 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಭಾನುವಾರ 34 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ.