ಕೊಡಗು ಜಾನಪದ ಪರಿಷತ್ ನಿಂದ ನಾಟು ನುಡಿ ಕೃತಿ ಲೋಕಾರ್ಪಣೆ

September 20, 2020

ಮಡಿಕೇರಿ ಸೆ.20 : ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಕಟಿಸಿದ ಜಿಲ್ಲೆಯ ವಿವಿಧ ಕವಿಗಳ ಕವನಗಳ ಸಂಗ್ರಹವಾದ ನಾಟು ನುಡಿ ಸಂಕಲನವನ್ನು ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಪ್ರಕಾಶ್ ಲೋಕಾರ್ಪಣೆಗೊಳಿಸಿದರು.
ನಗರದ ಲಯನ್ಸ್ ಸಭಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಾಟು ನುಡಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಲೇಖಕನಾದವನಿಗೆ ಕಾವ್ಯಭಾμÉಯ ಬಗ್ಗೆ ಅಪಾರ ಜ್ಞಾನ ಇರಬೇಕು. ಕಾವ್ಯ ಎಂಬುವುದು ನವಮಾಸ ಹೊತ್ತ ಶಿಶು ಧರೆಗೆ ಬರುವಂಥ ರೀತಿಯ ಪವಾಡವಾಗಿದೆ ಎಂದು ಅಭಿಪ್ರಾಯಪಟ್ಟರು.
ಒಂದು ಕಟ್ಟಡ ನಿರ್ಮಾಣವಾಗಬೇಕಾದರೆ ಮಣ್ಣು, ಇಟ್ಟಿಗೆ ಹೇಗೆ ಮುಖ್ಯವೋ ಹಾಗೇ ಲೇಖಕನಾದವನಿಗೆ ಭಾμÉಯೂ ಬಹಳ ಮುಖ್ಯ ಎಂದು ಹೇಳಿದ ಡಾ.ಪ್ರಕಾಶ್, ರಸಋಷಿ ಕುವಂಪು ಜಾನಪದದಿಂದ ಸದಾ ದೂರವೇ ಉಳಿದರು. ಆದರೆ ದ.ರಾ,ಬೇಂದ್ರೆ ಮತ್ತು ಚಂದ್ರಶೇಖರ ಕಂಬಾರರು ಜಾನಪದ ಸೊಗಡನ್ನೇ ತಮ್ಮ ಕಾವ್ಯ,ಸಾಹಿತ್ಯಕ್ಕೆ ಹೆಚ್ಚಾಗಿ ಬಳಸಿಕೊಂಡು ಖ್ಯಾತನಾಮರಾದರು ಎಂದು ಹೇಳಿದರು.
ಹಿಂದಿನ ಕಾಲದ ಆಟಿಕೆಗಳು, ಬಾಲ್ಯದ ನೆನಪಿನೊಂದಿಗೆ ಮರೆಯಾಗುತ್ತಿದೆ. ಹಳೇ ಕಾಲದ ಅನೇಕ ವಿಚಾರಗಳ ಸೊಗಡು ಮುಂದಿನ ದಿನಗಳಲ್ಲಿ ಕಾವ್ಯಕ್ಕೇ ಮಾತ್ರ ಸೀಮಿತವಾಗುವ ಅಪಾಯ ಎದುರಾಗಿದೆ ಎಂದೂ ಪ್ರಕಾಶ್ ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಕವಿಗಳು ಹೊಸತನಕ್ಕೆ ಆದ್ಯತೆ ನೀಡಬೇಕು. ಸದಾ ಹೊಸತನದ ಹುಡುಕಾಟದ ಕ್ರಿಯಾತ್ಮಕತೆ ಕವಿಗಳಲ್ಲಿ ಕಂಡುಬರಬೇಕು. ಕವಿತೆಗಳು ಮತ್ತೊಬ್ಬರ ಚಿಂತನೆಗಳನ್ನು ಬಡಿದೆಬ್ಬಿಸುವಂತಿರಬೇಕು ಎಂದರಲ್ಲದೇ ಪ್ರತಿಯೋರ್ವರಲ್ಲಿಯೂ ಸಾಮಥ್ರ್ಯ ಎಂಬುದು ಸುಪ್ತವಾಗಿರುತ್ತದೆ. ಅದನ್ನು ಬೆಳಕಿಗೆ ತರಲು ಸಂಕುಚಿತ ಭಾವನೆಗಳನ್ನು ದೂರಮಾಡಬೇಕೆಂದು ಹೇಳಿದರು.
ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾಯ9ದಶಿ9 ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ, ಅವಿಭಕ್ತ ಕುಟುಂಬ ಪದ್ದತಿಯೇ ಕಣ್ಮರೆಯಾಗುತ್ತಿದೆ. ಜಾನಪದ ಕೂಡ ಯುವಪೀಳಿಗೆಯ ಆಧುನೀಕತೆಯಿಂದಾಗಿ ಮರೆಯಾಗುವ ಅಪಾಯದಲ್ಲಿದೆ. ಹೀಗಿದ್ದರೂ ಜಾನಪದ ಪರಿಷತ್ ಮೂಲ ಜಾನಪದ ರಕ್ಷಣೆ ನಿಟ್ಟಿನಲ್ಲಿ ಕಾಯ9ಪ್ರವೖತ್ತವಾಗಿದೆ. ಪರಸ್ಪರ ಕೊಡು ಕೊಳ್ಳುವಿಕೆಯ ಮೂಲಕ ಶಾಂತಿ,ಸೌಹಾಧ9ದ ಸಮಾಜ ಸ್ಥಾಪನೆಯ ಅನಿವಾಯ9ತೆ ಇಂದಿನ ದಿನಗಳಲ್ಲಿದೆ ಎಂದು ಅಭಿಪ್ರಾಯಪಟ್ಟರು.
ನಾಟು ನುಡಿ ಕೃತಿಯ ಪ್ರಕಟಣೆಯ ದಾನಿಗಳಾದ ಅಂಬೆಕಲ್ ಕುಶಾಲಪ್ಪ ಮಾತನಾಡಿ, ಜಾನಪದ ಸಂಬಂಧಿತ ಕವನಗಳು ಮುಂದಿನ ದಿನಗಳಿಗೆ ದಾಖಲೆಯಾಗಿ ಉಳಿಯಬೇಕು. ರಾಜ್ಯದ ಸಕ್ರಿಯ ಜಾನಪದ ಸಂಬಂಧಿತ ಸಂಸ್ಥೆಗಳಲ್ಲಿ ಗುರುತಿಸಲ್ಪಟ್ಟಿರುವ ಕೊಡಗು ಜಾನಪದ ಪರಿಷತ್ ಈ ನಿಟ್ಟಿನಲ್ಲಿ ನಾಟು ನುಡಿ ಪ್ರಕಟಿಸಿರುವುದು ಶ್ಲಾಘನೀಯ ಎಂದರು.
ಜಾನಪದ ಕವಿಯತ್ರಿ ಅಂಬೆಕಲ್ ಸುಶೀಲಾ ಕುಶಾಲಪ್ಪ ಮಾತನಾಡಿ, ಜಿಲ್ಲಾ ಜಾನಪದ ಪರಿಷತ್ ಜಿಲ್ಲೆಯಲ್ಲಿನ ಸಾಹಿತಿ, ಕವಿಗಳಲ್ಲಿನ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಪುಸ್ತಕ ಮುದ್ರಣ ದಾನಿಗಳ ಕುರಿತು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿದರು.
ಇದೇ ವೇಳೆ ದಾನಿಗಳಾದ ಕುಶಾಲಪ್ಪ ದಂಪತಿಗಳನ್ನು ಸನ್ಮಾನಿಸಲಾಯಿತು. ಕೆ.ಜಯಲಕ್ಷ್ಮಿ ನಿರೂಪಿಸಿ, ಮೌನ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಜಾನಪದ ಪರಿಷತ್ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿ, ಖಜಾಂಚಿ ಎಸ್.ಎಸ್.ಸಂಪತ್ ಕುಮಾರ್ ವಂದಿಸಿದರು. ಗಾಳಿಬೀಡಿನ ಗಾಯಕಿ ಮಮತಾ ಅವರಿಂದ ಹಾಡುಗಾರಿಕೆ ನಡೆಯಿತು. ಜಿಲ್ಲಾ ಸಮಿತಿ, ಜಿಲ್ಲೆಯ ವಿವಿಧ ತಾಲೂಕು, ಹೋಬಳಿ ಘಟಕಗಳ ಪದಾಧಿಕಾರಿಗಳು, ಕವಿ, ಕವಿಯತ್ರಿಯರು ಪಾಲ್ಗೊಂಡಿದ್ದರು.

error: Content is protected !!