ಗೂನಡ್ಕದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ

21/09/2020

ಮಡಿಕೇರಿ ಸೆ. 21 : ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಹಾಗೂ ಮುಂಬರುವ ಗ್ರಾ. ಪಂ. ಗೆ ಯುವಕರನ್ನು ಸಂಘಟಿಸುವ ನಿಟ್ಟಿನಲ್ಲಿ ಸಂಪಾಜೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.
ಈ ಸಂದರ್ಭ ದ.ಕ.ಜಿಲ್ಲಾ ಎನ್‍ಎಸ್‍ಯುಐ ಸಮಿತಿಯ ಉಪಾಧ್ಯಕ್ಷ ಶೌವಾದ್ ಮಾತನಾಡಿ, ತಳಮಟ್ಟದಿಂದ ಬೆಳೆದು ಬಂದ ನಾಯಕರು ಯುವ ಕಾಂಗ್ರೆಸ್ ಮೂಲಕ ಮುಂಚೂಣಿಗೆ ಬಂದಿದ್ದು, ರಾಷ್ಟ್ರಕ್ಕೆ ಹಲವಾರು ಉನ್ನತ ನಾಯಕರನ್ನು ನೀಡಿದೆ ಎಂದರು.
ಕರ್ನಾಟಕದಲ್ಲಿ ಯುವ ಕಾಂಗ್ರೆಸ್ ಆನ್ ಲೈನ್ ಸದಸ್ಯತ್ವಕ್ಕೆ ಚಾಲನೆಯನ್ನು ನೀಡಲಾಗಿದ್ದು, ಸಂಪಾಜೆಯಲ್ಲಿ ಅತ್ಯಧಿಕ ಸಂಖ್ಯೆಯ ಯುವ ಸದಸ್ಯರನ್ನು ನೋಂದಾವಣಿ ಮಾಡುವ ಗುರಿಯನ್ನು ಹೊಂದಲಾಗಿದೆ. ಆ ಮೂಲಕ ಮುಂಬರುವ ಗ್ರಾ. ಪಂ. ಚುನಾವಣೆಗೆ ಸಜ್ಜಾಗಲಿದ್ದೇವೆ ಎಂದು ತಿಳಿಸಿದರು.
ಸಂಪಾಜೆ ಗ್ರಾ. ಪಂ. ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಮಾತನಾಡಿ, ತಾನು ಯುವ ಕಾಂಗ್ರೆಸ್ ಮೂಲಕ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಪಕ್ಷ ತನಗೆ ಜನಸೇವೆ ಮಾಡಲು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಎಂದರು.
ಸಂಪಾಜೆ ಗ್ರಾ. ಪಂ. ಮಾಜಿ ಸದಸ್ಯ ಪಿ.ಕೆ.ಅಬೂಸಾಲಿ ಮಾತನಾಡಿ, ಅತೀ ಹೆಚ್ಚು ಯುವ ಕಾಂಗ್ರೆಸ್ ಸದಸ್ಯರನ್ನು ನೋಂದಾಯಿಸುವ ಮೂಲಕ ಸಂಪಾಜೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ ಎಂಬುದನ್ನು ತೋರಿಸಬೇಕಾಗಿದೆ ಎಂದರು.
ಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಬಾಲಚಂದ್ರ, ಎಸ್.ಕೆ.ಹನೀಫ್, ರಕ್ಷಿತ್, ತಾಜುದ್ದೀನ್, ಕಿಶೋರ್ ಕುಮಾರ್, ಅಜರುದ್ದೀನ್, ಜಯಚಂದ್ರ, ಮುನೀರ್, ಪ್ರಗತಿ, ನಾರಾಯಣ, ಮುನೀರ್ ದಾರಿಮಿ, ತಾಜುದ್ದೀನ್ ಅರಂತೋಡು, ನವೀನ್, ಉನೈಸ್, ಪ್ರಸನ್ನ ಕುಮಾರ್, ಹ್ಯಾರಿಸ್, ಅವಿನಾಶ್, ಶಿಹಾಬ್, ಹರ್ಷಿತ್, ರಿಯಾಜ್, ಅಶ್ರಫ್, ಅಬ್ದುಲ್ಲ ಜಿ.ಎಂ, ಕುಂಞಕಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.