ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2308ಕ್ಕೆ ಏರಿಕೆ

September 21, 2020

ಮಡಿಕೇರಿ ಸೆ.21 : ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 12 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 25 ಸೇರಿದಂತೆ ಒಟ್ಟು 37 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮೈಸೂರಿನ 20 ವರ್ಷದ ಮಹಿಳೆ ಮತ್ತು 35 ವರ್ಷದ ಪುರುಷ. ಸೋಮವಾರಪೇಟೆ ಶಿರಂಗಾಲ ಸರ್ಕಾರಿ ಶಾಲೆ ಸಮೀಪದ 53 ವರ್ಷದ ಪುರುಷ. ಕುಶಾಲನಗರ ರಾಧಾ ಕೃಷ್ಣ ಲೇಔಟಿನ ಸೋಮೇಶ್ವರ ಬ್ಲಾಕ್ ನ 34 ವರ್ಷದ ಮಹಿಳೆ, 41 ವರ್ಷದ ಪುರುಷ ಮತ್ತು 9 ವರ್ಷದ ಬಾಲಕ. ಹಾಸನ ಅರಕಲಗೂಡುವಿನ 34 ವರ್ಷದ ಪುರುಷ. ಮಡಿಕೇರಿ ವೈದ್ಯಕೀಯ ಕಾಲೇಜ್‍ನ ಭೋಧಕೇತರ ಸಿಬ್ಬಂದಿ ವಸತಿಗೃಹದ 27 ವರ್ಷದ ಪುರುಷ. ಮಡಿಕೇರಿ ಕಾಲೇಜು ರಸ್ತೆಯ ಉಡುಪಿ ಹೊಟೇಲ್ ಸಮೀಪದ 53 ವರ್ಷದ ಪುರುಷ. ಸೋಮವಾರಪೇಟೆ ಸುಗ್ಗಿಕಟ್ಟೆ ಚೌಡ್ಲುವಿನ 45 ವರ್ಷದ ಮಹಿಳೆ. ಸೋಮವಾರಪೇಟೆ ಬಿಳಿಗಿರಿಯ ಕುಂಬೂರು ಅಂಚೆಯ 28 ವರ್ಷದ ಮಹಿಳೆ. ಮಡಿಕೇರಿ ಚೈನ್ ಗೇಟ್‍ನ ಪಿ.ಡಬ್ಲ್ಯೂ. ಡಿ ವಸತಿ ಗೃಹದ 43 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ಬಸವನಹಳ್ಳಿ ಗ್ರಾಮ ಮತ್ತು ಅಂಚೆಯ ಮೊರಾರ್ಜಿ ಶಾಲೆ ಸಮೀಪದ 25 ವರ್ಷದ ಮಹಿಳೆ. ನಾಪೆÇೀಕ್ಲು ಕೈಕಾಡುವಿನ 42 ವರ್ಷದ ಪುರುಷ. ವಿರಾಜಪೇಟೆ ಸಿದ್ದಾಪುರ ಗ್ರಾಮದ ಹೈ ಸ್ಕೂಲ್ ಸಮೀಪದ 40 ವರ್ಷದ ಮಹಿಳೆ. ವಿರಾಜಪೇಟೆ ಐಮಂಗಲ ಕೊಮೆತಾಡು ಸೇತುವೆಯ 57 ವರ್ಷದ ಮಹಿಳೆ. ವಿರಾಜಪೇಟೆ ತಿಮ್ಮಯ್ಯ ಲೇಔಟಿನ 27 ವರ್ಷದ ಪುರುಷ. ಶನಿವಾರಸಂತೆ ಗೋಪಾಲಪುರ ಬನಶಂಕರಿ ದೇವಾಲಯ ಸಮೀಪದ 32 ವರ್ಷದ ಪುರುಷ. ಶನಿವಾರಸಂತೆ ಹಿತ್ತಲಕೇರಿಯ 22 ವರ್ಷದ ಪುರುಷ. ಸೋಮವಾರಪೇಟೆ ಆಲೂರು ಸಿದ್ಧಾಪುರ ಅಂಚೆಯ 45 ವರ್ಷದ ಮಹಿಳೆ. ಮಡಿಕೇರಿ ನಾಪೋಕ್ಲುವಿನ ಬಸ್ ನಿಲ್ದಾಣ ಸಮೀಪದ 50 ವರ್ಷದ ಮಹಿಳೆ. ಸೋಮವಾರಪೇಟೆ ನೆಲ್ಲಿಹುದಿಕೇರಿಯ ಮಣಪುರಂ ಫೈನಾನ್ಸ್ ಸಮೀಪದ 29 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಭಾರತ್ ಪೆಟ್ರೋಲ್ ಪಂಪ್ ಸಮೀಪದ 68 ವರ್ಷದ ಪುರುಷ. ಮಡಿಕೇರಿ ಪೆರಾಜೆ ಗ್ರಾಮ ಮತ್ತು ಅಂಚೆಯ 46 ಮತ್ತು 25 ವರ್ಷದ ಮಹಿಳೆಯರು. ಶನಿವಾರಸಂತೆ ವಿಘ್ನೇಶ್ವರ ಕಲ್ಯಾಣ ಮಂಟಪ ಸಮೀಪದ 44 ವರ್ಷದ ಪುರುಷ. ಶನಿವಾರಸಂತೆ ಹುಲ್ಸೆಯ ವಾಟರ್ ಟ್ಯಾಂಕ್ ಸಮೀಪದ 34 ವರ್ಷದ ಪುರುಷ.
ಕುಶಾಲನಗರ ಹೌಸಿಂಗ್ ಬೋರ್ಡ್ ಸಮೀಪದ ಆರ್.ಆರ್.ಆರ್ ಲೇಔಟಿನ 69 ವರ್ಷದ ಪುರುಷ. ಸೋಮವಾರಪೇಟೆ ಆಲೂರು ಸಿದ್ದಾಪುರ ಸರ್ಕಾರಿ ಶಾಲೆ ಸಮೀಪದ 20 ವರ್ಷದ ಪುರುಷ. ಕುಶಾಲನಗರ ರಾಧಾಕೃಷ್ಣ ಬಡಾವಣೆಯ 4ನೇ ಬ್ಲಾಕ್‍ನ 58 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರ ಬೈಚನಹಳ್ಳಿಯ ಅಂಬೇಡ್ಕರ್ ಬಡಾವಣೆಯ 40 ವರ್ಷದ ಪುರುಷ. ಸೋಮವಾರಪೇಟೆ ದೊಡ್ಡಹನಕೋಡು ಗ್ರಾಮದ 54 ವರ್ಷದ ಪುರುಷ. ಸುಂಟಿಕೊಪ್ಪ ಪಂಪ್ ಹೌಸ್ ಸಮೀಪದ 75 ವರ್ಷದ ಪುರುಷ. ಪಿರಿಯಾಪಟ್ಟಣ ಬೆಟ್ಟದಪುರ ಪಂವಾಯತಿ ಕಚೇರಿ ಹಿಂಭಾಗದ 50 ವರ್ಷದ ಪುರುಷ. ಸೋಮವಾರಪೇಟೆ ನೆಲ್ಲಿಹುದಿಕೇರಿಯ ನಲವತ್ತೆಕ್ರೆ ಚಾಮುಂಡೇಶ್ವರಿ ದೇವಾಲಯ ಸಮೀಪದ 48 ವರ್ಷದ ಪುರುಷ. ಮಡಿಕೇರಿ ದೇಚೂರು ಚಾಮರಾಜ ಬಂಗಲೆ ಸಮೀಪದ 30 ವರ್ಷದ ಪುರುಷ. ಮಡಿಕೇರಿ ತ್ಯಾಗರಾಜ ಕಾಲೋನಿಯ 67 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2308 ಆಗಿದ್ದು, 1872 ಮಂದಿ ಗುಣಮುಖರಾಗಿದ್ದಾರೆ. 406 ಸಕ್ರಿಯ ಪ್ರಕರಣಗಳಿದ್ದು, 30 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 355 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!