ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

September 21, 2020

ಮಡಿಕೇರಿ ಸೆ.21 -ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರಿಂದ ಅನುಷ್ಠಾನಗೊಂಡಿರುವ ಇಲಾಖೆಯ ಯೋಜನೆಯಾದ ‘ಯುವ ಸ್ಪಂದನ’ ದಲ್ಲಿ ಯುವ ಪರಿವರ್ತಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ;-ಪದವೀಧರ ಯುವಕರು ಅವಶ್ಯವಿರುವ ಕೌಶಲ್ಯ, ಸ್ಥಳೀಯ ಭಾಷೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದು, ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಉತ್ತಮ ಅಂತರ್ ವ್ಯಕ್ತಿಯ ಸಂವಹನ ಕೌಶಲ್ಯ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು. ಸಮುದಾಯದಲ್ಲಿ ಯುವಜನರಿಗೆ ತರಬೇತಿಯಂತಹ ಹಾಗೂ ಯುವ ಜನ ಸಂಬಂಧಿ ವಿಷಯಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು. 21 ರಿಂದ 35 ವರ್ಷ ವಯೋಮಿತಿ ಹೊಂದಿರಬೇಕು. ಆಸಕ್ತಿಯುಳ್ಳವರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಕ್ರೀಡಾಂಗಣ ಮ್ಯಾನ್ಸ್ ಕಾಂಪೌಂಡ್ ಕೊಡಗು ಇವರಿಗೆ ಸೆಪ್ಟೆಂಬರ್, 25 ರೊಳಗೆ ಅರ್ಜಿ ತಲುಪಿಸಬೇಕು. ಸಂದರ್ಶನದ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ಯುವ ಸ್ಪಂದನದ ಕ್ಷೇತ್ರ ಸಂಪರ್ಕಾಧಿಕಾರಿಗಳಾದ ವೆಂಕೋಬ ದೂ.ಸಂ: 9611069973 ಮತ್ತು ಯುವ ಸಮಾಲೋಚಕರಾದ ಹರ್ಷಿತ ದೂ.ಸಂ. 7760911250 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿಬಾಯಿ ಅವರು ತಿಳಿಸಿದ್ದಾರೆ.

error: Content is protected !!