ಹತ್ತು ವರ್ಷ ಪೂರೈಸಿದ ಕೊಡವಾಮೆ ಸಂಘಟನೆ : ಕಾರ್ಯಪ್ಪ ಕಾಲೇಜಿನಲ್ಲಿ ಗಿಡ ನೆಡುವ ಕಾರ್ಯಕ್ರಮ

21/09/2020

ಮಡಿಕೇರಿ ಸೆ. 21 : ಕೊಡವಾಮೆ ಸಂಘಟನೆ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕೊಡವಾಮೆ ಸಂಘಟನೆಯು ಹತ್ತು ವರ್ಷ ಪೂರೈಸಿರುವ ನಿಟ್ಟಿನಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಬೊಟಾನಿಕಲ್ ಗಾರ್ಡನ್ ರಚಿಸುವ ಉದ್ದೇಶದಿಂದ ಕಾಲೇಜು ಆಡಳಿತ ಮಂಡಳಿ ಸಹಕಾರದೊಂದಿಗೆ ಸಂಘದ ಪ್ರಮುಖರು ಗಿಡಗಳನ್ನು ನೆಟ್ಟರು.

ಈ ಸಂದರ್ಭ ಸಂಘಟನೆಯ ಟ್ರಸ್ಟಿ ಉದಿಯಂಡ ರೋಷನ್ ಸೋಮಣ್ಣ ಮಾತನಾಡಿ, ಸಂಘಟನೆಯು 10 ವರ್ಷಗಳನ್ನು ಪೂರೈಸುತ್ತಿದು,್ದ ಈ ನಿಟ್ಟಿನಲ್ಲಿ ಸಂಘಟನೆಯ ವಿವಿಧ ಚಟುವಟಿಕೆಗಳೊಂದಿಗೆ ಎಫ್‍ಎಂಸಿ ಕಾಲೇಜು ಆವರಣದಲ್ಲಿ ಕಾಲೇಜು ಆಡಳಿತ ಮಂಡಳಿ ಸಹಕಾರದೊಂದಿಗೆ ಕೊಡಗಿನ ಸ್ಥಳೀಯ ಸಸ್ಯಗಳು, ಹಣ್ಣು ಗಿಡಗಳು ಸೇರಿದಂತೆ ಬೊಟಾನಿಕಲ್ ಗಾರ್ಡನ್ ರಚಿಸಲು ಉದ್ದೇಶಿಸಲಾಗಿದೆ ಎಂದರು.

ನಗರಸಭೆ ಪೌರಾಯುಕ್ತ ರಾಮ್‍ದಾಸ್ ಮಾತನಾಡಿ, ಕೊಡವಾಮೆ ಸಂಘಟನೆಯಿಂದ ಪ್ರತೀ ವರ್ಷ ಗಿಡ ನೆಡುವ ಕಾರ್ಯಕ್ರಮ ನಡೆಸಿತ್ತಾ ಬಂದಿದ್ದು, ಇಂತಹ ಉತ್ತಮ ಕಾರ್ಯಗಳು ಸಂಘಟನೆಯಿಂದ ಮತ್ತಷ್ಟು ಆಗಲಿ ಎಂದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ ಮಾತನಾಡಿ, ಕೊಡವಾಮೆ ಸಂಘಟನೆ ಪ್ರತೀವರ್ಷದಂತೆ ಈ ಬಾರಿಯು ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದು, ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ಬೆಳೆಸುವತ್ತ ಗಮನಹರಿಸುವಂತಾಗಬೇಕು ಎಂದರು.

ಈ ಸಂದರ್ಭ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಪ್ರಾಂಶುಪಾಲ ಚೌರಿರ ಜಗತ್ ತಿಮ್ಮಯ್ಯ, ನಿವೃತ ಪ್ರಾಂಶುಪಾಲ ತಡಿಯಂಗಡ ತಿಮ್ಮಯ್ಯ, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ, ಪ್ರಮುಖರಾದ ಚೆಯ್ಯಂಡ ಸತ್ಯ, ತಮ್ಮು ಪೂವಯ್ಯ, ಬೊಳ್ಳಜೀರ ಅಯ್ಯಪ್ಪ ಮತ್ತಿತರರು ಇದ್ದರು.