ಕೇರಳಕ್ಕೆ ಸಾಗಾಟವಾಗುತ್ತಿದ್ದ 35 ಎಮ್ಮೆಗಳು ವಶ : ನಾಲ್ವರ ಬಂಧನ

21/09/2020

ಮಡಿಕೇರಿ ಸೆ.21 : ನಿಯಮ ಬಾಹಿರವಾಗಿ ಉತ್ತರ ಪ್ರದೇಶದಿಂದ ಕೊಡಗಿನ ಮೂಲಕ ಕೇರಳಕ್ಕೆ ಸಾಗಾಟವಾಗುತ್ತಿದ್ದ 35 ಎಮ್ಮೆಗಳು ಮತ್ತು ಲಾರಿಯನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸುವಲ್ಲಿ ವಿರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹರಿಯಾಣ ರಾಜ್ಯದ ನೂಹು ಜಿಲ್ಲೆಯ ಗುರುಗಾಂ ನಿವಾಸಿಗಳಾದ ಇರ್ಷಾದ್ (27), ಸಹಬುದ್ದೀನ್ (45), ಜಾಹೀದ್ (36) ಮತ್ತು ಮುಬೀನ್ (25) ಬಂಧಿತ ಆರೋಪಿಗಳು. ವಿರಾಜಪೇಟೆ ಪೆರುಂಬಾಡಿ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ಲಾರಿಯನ್ನು ಪರಿಶೀಲಿಸಿದಾಗ ಕಸಾಯಿಖಾನೆಗೆ ಎಮ್ಮೆಗಳನ್ನು ಸಾಗಿಸುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.
ವಿರಾಜಪೇಟೆ ಉಪವಿಭಾಗ ಪೊಲೀಸು ಅಧೀಕ್ಷಕÀ ಸಿ.ಟಿ.ಜಯಕುಮಾರ್ ಮತ್ತು ವೃತ್ತ ನೀರಿಕ್ಷಕÀ ಕ್ಯಾತೆಗೌಡ ಅವರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ, ಎ.ಎಸ್.ಐ ಸೋಮಯ್ಯ, ಸಿಬ್ಬಂದಿಗಳಾದ ಮಧು, ಪ್ರಕಾಶ್, ಗೀತಾ, ಲೋಕೇಶ್ ಹಾಗೂ ರಂಜನ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.