ಜಿಂಕೆ ಬೇಟೆಯಾಡಿದ ಇಬ್ಬರ ಬಂಧನ : ಮತ್ತಿಬ್ಬರು ಪರಾರಿ : ಕೇಂಬುಕೊಲ್ಲಿಯಲ್ಲಿ ಪ್ರಕರಣ

September 21, 2020

ಮಡಿಕೇರಿ ಸೆ.21 : ಕಾಡಿನಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಹೊತ್ತುಯ್ಯುತ್ತಿದ್ದ ಬೇಟೆಗಾರರನ್ನು ಆನೆಚೌಕೂರು ವನ್ಯಜೀವಿ ವಲಯದಲ್ಲಿ ಬಂಧಿಸಲಾಗಿದೆ.
ಜಿಂಕೆ ಭೇಟೆಯಾಡಿ ಮಾಂಸ ಹೊತ್ತು ತರುತ್ತಿರುವ ಖಚಿತ ಮಾಹಿತಿ ದೊರೆತು ಕೇಂಬುಕೊಲ್ಲಿ ಬಳಿಯ ಆನೆಕಂದಕದ ಬಳಿ ಹೊಂಚು ಹಾಕಿ ಕಾದಿದ್ದ ಅರಣ್ಯ ಇಲಾಖೆಯ ಕಾರ್ಯಪಡೆ ಎನ್.ಬಿ.ಮನು ಹಾಗೂ ಮಂಜು ಎಂಬುವವರನ್ನು ಬಂಧಿಸಿದೆ. ಪಿ.ಯು.ಪೂವಯ್ಯ ಹಾಗೂ ರಾಜು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಂಧಿತರಿಂದ 20 ಕೆಜಿ. ಜಿಂಕೆ ಮಾಂಸ, ಜಿಂಕೆ ಚರ್ಮ, ಕೊಂಬು, ಕೋವಿ ಹಾಗೂ ಕತ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಆರೋಪಿಗಳ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ನೇತೃತ್ವದಲ್ಲಿ ಉಪವಲಯ ಸಂರಕ್ಷಣಾಧಿಕಾರಿ ಸತೀಶ್, ಯೋಗೇಶ್ವರ್, ಶಶಿಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

error: Content is protected !!