ವಿರಾಜಪೇಟೆ ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷರಾಗಿ ಪಿ.ಎ. ಮಂಜುನಾಥ್ ಅಧಿಕಾರ ಸ್ವೀಕಾರ

22/09/2020

ವಿರಾಜಪೇಟೆ:ಸೆ:21: ಜೆ.ಡಿ.ಎಸ್ ಪಕ್ಷವು ಜಾತ್ಯಾತೀತ ತತ್ವ ಸಿದ್ದಾಂತಗಳ ಮೇಲೆ ನೆಲೆನಿಂತಿದೆ ಸಮಾಜದ ಕಟ್ಟಾ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಬದ್ದವಾಗಿದೆ ಎಂದು ಜಿಲ್ಲಾ ಜಾತ್ಯಾತೀತ ಜನತಾ ದಳ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಬಿ ಗಣೇಶ್ ಅವರು ಹೇಳಿದರು.

ವಿರಾಜಪೇಟೆ ವಿಧಾನ ಸಭಾ ಕ್ಷೆತ್ರದ ವತಿಯಿಂದ ನಗರದ ಪುರಭವನ ಸಭಾಂಗಣದಲ್ಲಿ ಆಯೋಜನೆಗೊಂಡ ತಾಲ್ಲೂಕು ಅಧ್ಯಕ್ಷರ ಪದಗ್ರಹಣ ಸಮಾರಂಭ ಮತ್ತು ಚುನಾವಣೆ ಪೂರ್ವ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎಂ.ಬಿ.ಗಣೇಶ್ ಅವರು ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಬೇಕು ಗುಂಪುಗಾರಿಕೆಯನ್ನು ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡುವಂತಾಗಬೇಕು. ಅಂತರಿಕ ಸಮಸ್ಯೆಗಳು ಬದಿಗಿಟ್ಟು ಜನಸಮಾನ್ಯರೋಂದಿಗೆ ಬೆರೆತು ಪಕ್ಷದ ಎಳಿಗೆಗೆ ಪ್ರಯತ್ನಿಸಿದಲ್ಲಿ ಪಕ್ಷದ ಪರ ಜನಸಮಾನ್ಯನೀಗೆ ಒಲವು ಮೂಡುತ್ತದೆ. ರಾಜ್ಯದಲ್ಲಿ ಕುಮಾರ್ ಸ್ವಾಮಿ ಅವರ ಆಡಳಿತವು ನೀಡಿದ ಮಹತ್ತರವಾದ ಕಾರ್ಯಕ್ರಮಗಳ ಬಗ್ಗೆ ಮತದಾರರೀಗೆ ತೀಳಿಸುವಂತ ಕೆಲಸವಾಗಬೇಕಿದೆ. ಮುಂಬರುವ ಚುನಾವಣೆಗೆ ಪೂರ್ವ ಸಿದ್ದತೆ ಮಾಡುವಂತೆ ಕಾರ್ಯಕರ್ತರೀಗೆ ಮನವಿ ಮಾಡಿದರು.

ರಾಜ್ಯ ಸಮಿತಿಯ ಉಪಧ್ಯಕ್ಷರಾದ ಮನೋಜ್ ಬೋಪಯ್ಯ ಅವರು ಮಾತನಾಡಿ ದೇಶವ್ಯಾಪ್ತಿ ಹರಡಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲಗೊಂಡಿವೆ ಅಧಿಕಾರಕ್ಕೆ ಮಾತ್ರ ಸಿಮಿತವಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಎಡವುತಿದೆ.ಕುಮಾರ್ ಸ್ವಾಮಿ ಅವರು ರೈತ, ಬೆಳೆಗಾರರೀಗೆ. ಕಾರ್ಮಿಕರ ಕಲ್ಯಾಣಕ್ಕೆ ಸಾವಿರಾರು ಕೋಟಿ ಅನುಧಾನಗಳನ್ನು ನೀಡಿರುವುದು ಅವಿಸ್ಮರಣೀಯವಾದುದು. ರಾಜ್ಯ ಸರ್ಕಾರವು ಅನುಧಾನಗಳನ್ನು ನೀಡದೇ ರೈತರೀಗೆ ಅನ್ಯಾಯವೇಸಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ರಾಜ್ಯ ಮತ್ತು ಜಿಲ್ಲೆಯ ವಿವಿಧ ಘಟಕಗಳ ಮುಖಂಡರುಗಳು ವಿರಾಜಪೇಟೆ ನಗರದ ನಿವಾಸಿ ಪಿ.ಎ ಮಂಜುನಾಥ್ ಅವರಿಗೆ ಪಕ್ಷದ ಧ್ವಜ ಮತ್ತು ಪ್ರಮಾಣ ಪತ್ರ ನೀಡಿ ಅಧಿಕಾರ ಹಸ್ತಾಂತರಿಸಿದರು. ಸಮಾರಂಭದ ಸಂದರ್ಭದಲ್ಲಿ ನಗರ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮ ಉದ್ದೇಶಿಸಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್ ಮತೀನ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಇಸಾಖ್ ಖಾನ್ ಜಿಲ್ಲಾ ಅಲ್ಪ ಸಂಖ್ಯಾತ ಮಹಿಳ ಘಟಕದ ಅಧ್ಯಕ್ಷೆ ರುಬೀನಾ, ರಾಜ್ಯ ಮುಖಂಡರುಗಳಾದ ಎಂ.ಎಂ.ಷರೀಫ್, ಮನ್ಸೂರು ಆಲಿ, ಬಾಳೆಕುಟ್ಟೀರ ದಿನಿ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಲ್ಲಚಂಡ ಗೌತಂ ಮತ್ತು ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಾಸೀರ್ ಅವರುಗಳು ಮಾತನಾಡಿದರು.
ಮುಖಂಡರಾದ ಚೊಕಂಡಳ್ಳಿ ಮಜೀಜ್ ಸ್ವಾಗತಿಸಿದರೆ ಜಾಸೀರ್ ಅವರು ನಿರೂಪಿಸಿ ವಂದಿಸಿದರು.
ಪದಗ್ರಹಣ ಸಮಾರಂಭಕ್ಕೆ ಪಕ್ಷದ ರಾಜ್ಯ ಜಿಲ್ಲೆ ಮತ್ತು ತಾಲ್ಲೂಕಿನ ವಿವಿಧ ಘಟಕದ ಮುಖಂಡರುಗಳು ಮತ್ತು ಪಕ್ಷದ ಕಾರ್ಯಕರ್ತರು ನಾನಾ ಭಾಗಗಳಿಂದ ಆಗಮಿಸಿದ್ದರು.