ನೌಕಾಪಡೆಗೆ ಇಬ್ಬರು ಮಹಿಳಾ ಅಧಿಕಾರಿಗಳು

September 22, 2020

ಕೊಚ್ಚಿ ಸೆ.22 : ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಅವರು ಸೋಮವಾರ ಕೊಚ್ಚಿಯ ನೌಕಾ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಐಎನ್‍ಎಸ್ ಗರುಡ ಪಡೆಯನ್ನು ಅಧಿಕೃತವಾಗಿ ಸೇರ್ಪಡೆಗೊಂಡರು.
ನೌಕಾಪಡೆಯ ಮಲ್ಟಿ-ರೋಲ್ ಹೆಲಿಕಾಪ್ಟರ್‍ಗಳಲ್ಲಿ ಸೋನಾರ್ ಕನ್ಸೋಲ್‍ಗಳು ಮತ್ತು ಇಂಟೆಲಿಜೆನ್ಸ್, ಕಣ್ಗಾವಲು ಮತ್ತು ಮರುಪರಿಶೀಲನೆ (ಐಎಸ್‍ಆರ್) ತರಬೇತಿ ಪಡೆಯುತ್ತಿರುವ ಈ ಇಬ್ಬರೂ ಮಹಿಳಾ ಅಧಿಕಾರಿಗಳನ್ನು ಐಎನ್‍ಎಸ್ ಗರುಡ ಹಡಗಿಗೆ ಸ್ವಾಗತ ನೀಡಲಾಯಿತು.
ಎಂಎಚ್ -60 ಆರ್ ಹೆಲಿಕಾಪ್ಟರ್‍ಗಳನ್ನು ಶತ್ರು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚಲು ವಿನ್ಯಾಸಗೊಳಿಸಲಾಗಿದೆ. ಈ ಹೆಲಿಕಾಪ್ಟರ್‍ಗಳಲ್ಲಿ ಈ ಇಬ್ಬರೂ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.