ಡಾಬಾ ಶೈಲಿಯ ಮಟನ್ ಕರಿ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ಮಟನ್ ಅರ್ಧ ಕೆಜಿ, ಈರುಳ್ಳಿ- 2, ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ, ಟೊಮೆಟೊ ಪೇಸ್ಟ್ 1 ಕಪ್, ಬೆಳ್ಳುಳ್ಳಿ ಎಸಳು 5-6, ಹಸಿ ಮೆಣಸಿನ ಕಾಯಿ 2, ಖಾರದ ಪುಡಿ 1 ಚಮಚ, ಅರಿಶಿಣ ಪುಡಿ 1 ಚಮಚ, ಕೊತ್ತಂಬರಿ ಪುಡಿ 1, 1/2 ಚಮಚ, ಸಕ್ಕರೆ ಅರ್ಧ ಚಮಚ, ಜೀರಿಗೆ 1 ಚಮಚ, ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ ಲವಂಗ 2-3, ಏಲಕ್ಕಿ 2, ಪಲಾವ್ ಎಲೆ1, ರುಚಿಗೆ ತಕ್ಕ ಉಪ್ಪು, ತುಪ್ಪ, ನೀರು 2 ಕಪ್.
ತಯಾರಿಸುವ ವಿಧಾನ: 4 ಚಮಚ ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಮಟನ್ ಹಾಕಿ ಸಾಧಾರಣ ಉರಿಯಲ್ಲಿ ಮಟನ್ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಖಾರದ ಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಉಪ್ಪನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ನೀರು ಹಾಕಿ ಸ್ವಲ್ಪ ಗಟ್ಟಿ ಪೇಸ್ಟ್ ರೀತಿ ಮಾಡಿಡಿ.
ಈಗ ಮತ್ತೊಂದು ಪಾತ್ರೆಯನ್ನು ತೆಗದು ಅದರಲ್ಲಿ 2 ಚಮಚ ತುಪ್ಪ ಹಾಕಿ ಅದಕ್ಕೆ ಪಲಾವ್ ಎಲೆ, ಏಲಕ್ಕಿ, ಚಕ್ಕೆ ಲವಂಗ ಹಾಕಿ 2 ಸೆಕೆಂಡ್ ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.ಈಗ ಟೊಮೆಟೊ ಪೇಸ್ಟ್ ಮತ್ತು ಕಲೆಸಿದ ಮಸಾಲೆ ಪೇಸ್ಟ್ ಹಾಕಿ ಕುದಿಸಿ. ನಂತರ ಮಟನ್ ತುಂಡುಗಳನ್ನು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ, ಸಾರು ಕುದಿ ಬರುವಾಗ ಸ್ವಲ್ಪ ಸಕ್ಕರೆ ಹಾಕಿ. *ಮಟನ್ ಬೆಂದ ಮೇಲೆ ಉರಿಯಿಂದ ಇಳಿಸಿದರೆ ರುಚಿಕರವಾದ ಡಾಬಾ ಮಟನ್ ಕರಿ ರೆಡಿ.
