ಚೆಂಬು ವಲಯ ಕಾಂಗ್ರೆಸ್‍ನ ನೂತನ ಅಧ್ಯಕ್ಷರಾಗಿ ರವಿರಾಜ್ ಹೊಸೂರು ಆಯ್ಕೆ

22/09/2020

ಮಡಿಕೇರಿ ಸೆ. 22 : ಚೆಂಬು ವಲಯ ಕಾಂಗ್ರೆಸ್‍ನ ನೂತನ ಅಧ್ಯಕ್ಷರಾಗಿ ರವಿರಾಜ್ ಹೊಸೂರು ಆಯ್ಕೆಯಾಗಿದ್ದಾರೆ.
ಚೆಂಬು ಗ್ರಾ. ಪಂ. ಸಭಾಂಗಣದಲ್ಲಿ ನಡೆದ ಚೆಂಬು ವಲಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಕಾಚೇಲು ವಾಸುದೇವ, ಕುದುರೆಪಾಯ ಚೆನಿಯಪ್ಪ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಬಿ. ರಘುನಾಥ್, ಖಜಾಂಚಿಯಾಗಿ ಹಾರಂಬಿ ಅರುಣೋದಯ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ನೂತನ ಮಹಿಳಾ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ಭಾರತಿ ಕುಶಾಲಪ್ಪ, ಪದಾಧಿಕಾರಿಗಳಾದ ಕುಸುಮ ಯೋಗೇಶ್ವರ ಹಾಗೂ ದಿವ್ಯ ಸುಕುಮಾರ್ ಅವರನ್ನು ಅಭಿನಂದಿಸಲಾಯಿತು.
ನಿರ್ಗಮಿತ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ ಸುರೇಶ್ ಪಕ್ಷದ ಬಾವುಟ ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು.
ಸಭೆಯಲ್ಲಿ ಗ್ರಾ. ಪಂ. ಸದಸ್ಯ ಎನ್.ಸಿ ಮನೋಹರ್, ಹಿರಿಯ ಕಾಂಗ್ರೆಸ್ಸಿಗ ಕೆ. ಎ. ಪಕೀರ, ನಡುಬೆಟ್ಟು ಚೆನ್ನಪ್ಪ, ಪನೇಡ್ಕ ಪೆÇನ್ನಪ್ಪ, ಬೊಳ್ಳೂರು ಚಿನ್ನಪ್ಪ, ಗಿರೀಶ್ ಹೊಸೂರು, ಯತೀಶ್ ಕೆದಂಬಾಡಿ, ವಿನಯ ಕುಮಾರ್ ಮಣಿಕಲ್ಲು, ನವೀನ ರಾಮಕಜೆ, ಗಿರೀಶ ತೆಂಕಿಲ, ಮಲ್ಲಿಕಾರ್ಜುನ ಕುದುಕುಳಿ, ಮಿಥುನ್ ತೆಂಕಿಲ, ಕಾಚೇಲು ಪುರುಷೋತ್ತಮ, ಬಾಲಂಬಿ ಗುಣವಂತ, ಚಿದಾನಂದ ಅಂಬೆಕಲ್ಲು, ಸತೀಶ ಬೆಳ್ಚಪ್ಪಾಡ, ಕೇಶವ ಡಿಎನ್, ಬೊಳುಗಲ್ಲು ಜಗದೀಶ, ತೆಂಕಿಲ ಸುಂದರ, ಹೊಸೂರು ಅರುಣ ಕುಮಾರ್, Pಉ ಮೋಹನ, ಗೋಪಾಲ ದೊಡ್ಡಕೂಗಲೆ ಹಾಗೂ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.
ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ಸಿ. ಸುರೇಶ ವಂದಿಸಿದರು.