ಕೋವಿಡ್ ಪ್ರಕರಣಗಳ ಸಂಖ್ಯೆ 2348 ಕ್ಕೆ ಏರಿಕೆ : ಮಕ್ಕಳನ್ನು ಕಾಡಿದ ಸೋಂಕು

ಮಡಿಕೇರಿ ಸೆ.22 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 2348 ಕ್ಕೆ ಏರಿಕೆಯಾಗಿದ್ದು, 1911 ಮಂದಿ ಗುಣಮುಖರಾಗಿದ್ದಾರೆ. 406 ಸಕ್ರಿಯ ಪ್ರಕರಣಗಳಿದ್ದು 31 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 361 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 34 ಮತ್ತು ಮಧ್ಯಾಹ್ನ 6 ಸೇರಿದಂತೆ ಒಟ್ಟು 40 ಹೊಸ ಪ್ರಕರಣಗಳು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಮಡಿಕೇರಿಯ ಗಾಳಿಬೀಡು ಕಾಲೂರುವಿನ 12 ವರ್ಷದ ಬಾಲಕಿ ಮತ್ತು 5 ವರ್ಷದ ಬಾಲಕ, ನಗರದ ಪೆನ್ ಷನ್ ಲೈನ್ ಬಡಾವಣೆಯ 9 ವರ್ಷದ ಬಾಲಕ, ಭಾಗಮಂಡಲದ 12 ವರ್ಷದ ಬಾಲಕಿ ಮತ್ತು 11 ವರ್ಷದ ಬಾಲಕನಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ನಾಪೆÇೀಕ್ಲು ನೆಲಜಿ ಮುಖ್ಯ ರಸ್ತೆಯ 48 ವರ್ಷದ ಪುರುಷ. ಭಾಗಮಂಡಲ ಚೆಟ್ಟಿಮಾನಿ ಟೌನ್ ನ ಮಸೀದಿ ಸಮೀಪದ 37 ವರ್ಷದ ಮಹಿಳೆ. ಮಡಿಕೇರಿ ಕಡಗದಾಳು ಸರ್ಕಾರಿ ಶಾಲೆ ಸಮೀಪದ 62 ವರ್ಷದ ಪುರುಷ. ಮಡಿಕೇರಿ ಪೆನ್ ಷನ್ ಲೈನ್‍ನ ಚಿನ್ನಿ ಹೋಂಸ್ಟೇಯ 43 ವರ್ಷದ ಪುರುಷ, 39 ವರ್ಷದ ಮಹಿಳೆ, ಮಡಿಕೇರಿ ಪಾಪ್ಯುಲರ್ ಲಾಡ್ಜ್ ಸಮೀಪದ 36 ವರ್ಷದ ಪುರುಷ. ಮಡಿಕೇರಿ ಐಟಿಐ ಜಂಕ್ಷನ್ನಿನ 42 ವರ್ಷದ ಪುರುಷ. ಮಡಿಕೇರಿ ಮೈತ್ರಿ ಹಾಲ್ ಸಮೀಪದ 40 ವರ್ಷದ ಪುರುಷ. ಮಡಿಕೇರಿ ಅಶ್ವಿನಿ ಆಸ್ಪತ್ರೆ ಹಿಂಭಾಗದ 76 ವರ್ಷದ ಪುರುಷ. ಮಡಿಕೇರಿ ಸುದರ್ಶನ ವೃತ್ತದ ಡಿಟಿಸಿ ಸಮೀಪದ 31 ವರ್ಷದ ಮಹಿಳೆ. ಮಡಿಕೇರಿ ಗಾಳಿಬೀಡು ಕಾಲೂರುವಿನ 42 ವರ್ಷದ ಪುರುಷ. ಸುಂಟಿಕೊಪ್ಪ ಪಾರ್ವತಮ್ಮ ಎಕ್ಸ್ ಟೆಂಷನ್ನಿನ 1 ನೇ ಕ್ರಾಸ್ ನ 43 ವರ್ಷದ ಮಹಿಳೆ ಮತ್ತು 53 ವರ್ಷದ ಪುರುಷ. ಮಡಿಕೇರಿ ಎಫ್.ಎಂ.ಸಿ ಕಾಲೇಜ್ ನ ಅಂಗನವಾಡಿ ಸಮೀಪದ 23, 57 ವರ್ಷದ ಪುರುಷರು ಮತ್ತು 48 ವರ್ಷದ ಮಹಿಳೆ. ವಿರಾಜಪೇಟೆ ಬೊಯಿಕೇರಿಯ ಕೆಂಚಾಳಮ್ಮ ದೇವಾಲಯ ಸಮೀಪದ 39 ವರ್ಷದ ಮಹಿಳೆ. ವಿರಾಜಪೇಟೆ ವಿನಾಯಕ ನಗರ ಗಣಪತಿ ದೇವಾಲಯ ಸಮೀಪದ 45 ವರ್ಷದ ಮಹಿಳೆ ಮತ್ತು 76 ವರ್ಷದ ಪುರುಷ.
ಸೋಮವಾರಪೇಟೆ ಕೆ.ಇ.ಬಿ ವಸತಿಗೃಹದ 29 ವರ್ಷದ ಪುರುಷ. ಕುಶಾಲನಗರ ಬಸಪ್ಪ ಬಡಾವಣೆಯ ಸೋಮೇಶ್ವರ ದೇವಾಲಯ ಸಮೀಪದ 38 ವರ್ಷದ ಮಹಿಳೆ. ಕುಶಾಲನಗರ ಕೂಡಿಗೆ ವೃತ್ತ ಸಮೀಪದ 28 ವರ್ಷದ ಪುರುಷ. ನಾಪೆÇೀಕ್ಲು ಕೆನರಾ ಬ್ಯಾಂಕ್ ಸಮೀಪದ 22 ವರ್ಷದ ಪುರುಷ. ನಾಪೆÇೀಕ್ಲು ಬೇತು ಟೌನ್ ನ 38, 30 ವರ್ಷದ ಪುರುಷರು ಮತ್ತು 28 ವರ್ಷದ ಮಹಿಳೆ. ಮಡಿಕೇರಿ ಭಗವತಿ ನಗರದ ಭಗವತಿ ದೇವಾಲಯ ಸಮೀಪದ 55 ವರ್ಷದ ಮಹಿಳೆ. ವಿರಾಜಪೇಟೆ ಮಾಲ್ದಾರೆಯ ಹುಂಡಿ ಬಾಣಂಗಾಲ ಬಾಡಗದ 34 ವರ್ಷದ ಪುರುಷ. ಮಡಿಕೇರಿ ಪೆನ್ ಷನ್ ಲೈನ್ ನ ಕೋಟೆ ಮಾರಿಯಮ್ಮ ದೇವಾಲಯ ಸಮೀಪದ 46 ವರ್ಷದ ಪುರುಷ. ಮಡಿಕೇರಿ ಮೈತ್ರಿ ಹಾಲ್ ಸಮೀಪದ 28 ವರ್ಷದ ಮಹಿಳೆ. ಮಡಿಕೇರಿ ಆಸ್ಪತ್ರೆ ವಸತಿಗೃಹದ 38 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ದೇಚೂರುವಿನ ಗಣಪತಿ ದೇವಾಲಯ ಸಮೀಪದ 54 ವರ್ಷದ ಮಹಿಳೆ. ಕುಶಾಲನಗರ ಬೈಚನಹಳ್ಳಿಯ 31 ವರ್ಷದ ಪುರುಷ. ಕುಶಾಲನಗರ ವಿ.ಆರ್.ಎಲ್ ಕಟ್ಟಡ ಎದುರಿನ ಬಾಪೂಜಿ ಲೇಔಟ್ ನ 53 ವರ್ಷದ ಪುರುಷ. ಮಡಿಕೇರಿ ಕರಿಕೆಯ ಕುಂಡತ್ತಿಕನದ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.