ತಲಕಾವೇರಿಯಲ್ಲಿ ಅ.17 ರಂದು ಬೆಳಗ್ಗೆ 7.03 ಗಂಟೆಗೆ ತೀರ್ಥೋದ್ಭವ

September 22, 2020

ಮಡಿಕೇರಿ ಸೆ.22 : ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅ.17 ರಂದು ಬೆಳಗ್ಗೆ 7.03 ಗಂಟೆಗೆ ತೀರ್ಥೋದ್ಭವವಾಗಲಿದೆ ಎಂದು ಶ್ರೀತಲಕಾವೇರಿ, ಭಾಗಮಂಡಲ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸೆ.26 ರಂದು ಬೆಳಗ್ಗೆ 8.31 ಕ್ಕೆ ಸಲ್ಲುವ ತುಲಾಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ.4 ರಂದು ಬೆಳಗ್ಗೆ 10.33 ಗಂಟೆಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.14 ರಂದು ಬೆಳಗ್ಗೆ 11.45 ಗಂಟೆಗೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು, ಅ.14 ರಂದು ಸಾಯಂಕಾಲ 5.15 ನಿಮಿಷಕ್ಕೆ ಸಲ್ಲುವ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವುದು, ಅ.17 ರಂದು ಶನಿವಾರ ಬೆಳಗ್ಗೆ 7.03 ಗಂಟೆಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಶ್ರೀ ಮೂಲಕಾವೇರಿ ತೀರ್ಥೋದ್ಭವವಾಗಲಿದೆ ಎಂದು ತಿಳಿಸಿದ್ದಾರೆ.

error: Content is protected !!